ಜಾತಿ ಜನಗಣತಿಯಲ್ಲಿ ತೀಯಾರನ್ನು ಪ್ರತ್ಯೇಕ ಸಮುದಾಯವಾಗಿ ದಾಖಲಿಸಬೇಕು- ತೀಯಾ ಮಹಾಸಭಾ
ಕಾಸರಗೋಡು: ಮುಂದಿನ ವರ್ಷ ನಡೆಯಲಿರುವ ಜಾತಿ ಜನಗಣತಿಯಲ್ಲಿ ಮಲಬಾರಿನಲ್ಲಿರುವ ಸುಮಾರು 60 ಲಕ್ಷ ಜನಸಂಖ್ಯೆಯುಳ್ಳ ತೀಯÁರನ್ನು ಪ್ರತ್ಯೇಕ ಸಮುದಾಯ ವಾಗಿ ಸರ್ಕಾರದ ದಾಖಲೆಗಳಲ್ಲಿ ಸೇರಿಸಬೇಕೆಂದು ತೀಯಾ ಮಹಾ ಸಭಾದ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಈ ಸಮುದಾಯಕ್ಕೆ ಕೇವಲ ಉಪ ಜಾತಿಯೆಂಬ ಪರಿಗಣನೆಯ ಮೂಲಕ ಅವಕಾಶ ನಿರಾಕರಿಸುವುದು ಅನ್ಯಾ ಯವಾಗಿದೆ. 2026ರ ಜನದಯಗಣತಿ ಯಲ್ಲಿ ತೀಯಾ ಸಮುದಾಯದ ಬೇಡಿಕೆಯನ್ನು ಪರಿಗಣಿಸಲು ಸರಕಾರ ಮತ್ತು ಸಂಬAಧಪಟ್ಟ ಅಧಿಕಾರಿಗಳು ಸಿದ್ಧರಾಗಬೇಕು ಎಂದು ಉದಯಗಿರಿ ಶ್ರೀ ಹರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಲÁ ಯಿತು. ಜಿಲ್ಲಾ ಅಧ್ಯಕ್ಷ ಪಿ.ಸಿ. ವಿಶ್ವಂಭರನ್ ಪಣಿಕ್ಕರ್ ಧ್ವಜಾರೋಹಣ ನೆರವೇರಿಸಿದರು. ಕೃಷ್ಣನ್ ಕಾರ್ನವರ್, ನಾಗೇಶ್ ಕಾರ್ನವರ್, ಮಂಜು ಕಾರ್ನವರ್ ದೀಪ ಬೆಳಗಿಸಿದರು. ಪದ್ಮಶ್ರೀ ಬಾಲನ್ ಪುತೇರಿ ಸಮ್ಮೇಳನ ಉದ್ಘಾಟಿಸಿದರು. ಪಿ.ಸಿ. ವಿಶ್ವಂಭರನ್ ಪಣಿಕ್ಕರ್ ಅಧ್ಯಕ್ಷತೆ ವಹಿಸಿದರು. ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನA ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ. ಪ್ರಸಾದ್ ಚಟುವಟಿಕೆ ವರದಿ ಮಂಡಿಸಿದರು. ತೀಯಾ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸ ಬೇಕೆಂದು ಮುಖ್ಯ ಅತಿಥಿ, ಉತ್ತರ ಮಲಬಾರ್ ತಿಯÁ ಸಮುದಾಯ ದೇವಸ್ಥಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಿ. ರಾಜನ್ ಪೆರಿಯ ಕರೆ ನೀಡಿದರು. ಅಡ್ಕ ಶ್ರೀ ಭಗವತಿ ಕ್ಷೇತ್ರದಲ್ಲಿ ಕಳೆದ 66 ವರ್ಷಗಳಿಂದ ಆಚಾರ ಸ್ಥಾನಿಕನಾಗಿ ಸೇವೆ ಸಲ್ಲಿಸುವ ಕೃಷ್ಣನ್ ಕಾರ್ನವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಪಿ.ಟಿ. ಹರಿ ಹರನ್ ಪ್ರಸ್ತಾಪಿಸಿದರು. ಕಾಸರ ಗೋಡು ವಿಭಾಗದ ಕಾರ್ಯದರ್ಶಿ ಆಗ್ನೇಶ್ ಕಳೇರಿ ಶೋಕ ಸಂದೇಶ ವಾಚಿಸಿದರು. ಸಮುದಾಯದ ಗಣ್ಯ ವ್ಯಕ್ತಿಗಳಾದ ರಾಮನ್ ಗುರುಸ್ವಾಮಿ ಉದಯಗಿರಿ, ಡಾ. ಶೋಭ ಕಾಸರ ಗೋಡು, ಡಾ. ಅಕ್ಷಯ್ ಪ್ರಭಾಕರನ್, ಬಿಂದು ಮೈತ್ರಿ ಕಾಲೋನಿ, ಟಿವಿ ಶೀಬ ಇವರನ್ನು ಸನ್ಮಾನಿಸಲಾಯಿತು. ಮಧೂರು ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣನ್, ಸಂಘಟನಾ ಸಮಿತಿ ಅಧ್ಯಕ್ಷ ಎನ್. ಸತೀಶ್ ಮನ್ನಿ ಪ್ಪಾಡಿ, ರಾಜ್ಯ ಸಂಯೋಜಕ ಗಣೇಶ್ ಮಾವಿನಕಟ್ಟೆ, ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೊನ್ನಂಗಳ, ಮಧೂರು ಪಂ. ಸದಸ್ಯೆ ಸ್ಮಿತಾ ಸುಧಾ ಕರನ್, ಡಾ. ಎನ್. ಶ್ರೀಧರ ಏತಡ್ಕ, ತೀಯಾ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಲಕ್ಷ್ಮಣನ್, ರಾಜ್ಯ ಖಜಾಂಚಿ ಸಿ.ಕೆ. ಸದಾನಂದನ್, ರಾಜ್ಯ ಕಾರ್ಯದರ್ಶಿಗಳಾದ ಪ್ರೇಮಾನಂದನ್ ನಡುತ್ತೋಡಿ, ಸುನಿಲ್ ಕುಮಾರ್ ಚಾತಮತ್, ರಾಜ್ಯ ಉಪಾಧ್ಯಕ್ಷೆ ಸೌದಾಮಿನಿ ನಾರಾಯಣನ್ (ಮಲಪ್ಪುರಂ), ಜಿಲ್ಲಾ ರಕ್ಷಣಾಧಿಕಾರಿ ಎಂ. ಸುಕುಮಾರನ್ ಮಯಿಚ್ಚ, ಮಲಪ್ಪುರಂ ಜಿಲ್ಲಾ ಅಧ್ಯಕ್ಷ ಅಯ್ಯಪ್ಪನ್ ಪಟ್ಟಾಳತ್ತಿಲ್, ರಾಜ್ಯ ಸಮಿತಿ ಸದಸ್ಯರಾದ ದಾಮೋದರನ್ ಕೊಂಬತ್, ಬಾಲಕೃಷ್ಣನ್ ಮಾಸ್ಟರ್, ಸಜೀವನ್ ಮಾಹಿ, ಜಿಲ್ಲಾ ಉಪಾಧ್ಯಕ್ಷರಾದ ಕೆ.ವಿ. ರಾಜನ್ ಬೀರಿಚೇರಿ, ರಾಘವನ್ ಪೈವಳಿಕೆ, ಜಿಲ್ಲಾ ಕಾರ್ಯದರ್ಶಿಗಳಾದ ವಿಶ್ವನ್ ಎಳೇರಿ, ರಘು ಬಾನಂ, ರಾಘವನ್ ಪುತ್ತಿಗೆ, ಕೃಷ್ಣಾಬಾಯಿ, ಸುಧಾಭ ಚೆರುವತ್ತೂರು, ಭಗವತಿ ಮಹಿಳಾ ಸಂಘ ಪಿಲಿಕುಂಜೆ ತಳಂಗರೆ ಕಾರ್ಯದರ್ಶಿ ಪ್ರಿಯಾ ಶುಭಾಶಯ ನÀÄಡಿದರು. ಗಣೇಶ ಮಾವಿನಕಟ್ಟೆ ಸ್ವಾಗತಿಸಿ, ಟಿ.ವಿ ರಾಘವನ್ ವಂದಿಸಿದರು.