ಜಾನುವಾರು ಸಾಗಾಟಗಾರರು- ನಾಗರಿಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು

ಮಂಜೇಶ್ವರ: ಅಕ್ರಮವಾಗಿ ಕರ್ನಾಟಕದಿಂದ ಕೇರಳಕ್ಕೆ ಜಾನುವಾರು ಸಾಗಾಟ ನಡೆಸುತ್ತಿದ್ದ  ತಂಡಕ್ಕೆ ನಾಗರಿಕರ ತಂಡವೊಂದು  ತಡೆಯೊಡ್ಡಿದ್ದು, ಈ ವೇಳೆ ಘರ್ಷಣೆ ಉಂಟಾದ ಬಗ್ಗೆ ವರದಿಯಾಗಿದೆ. ನಿನ್ನೆ ಮುಂಜಾನೆ ಕುದ್ದುಪದವು- ಪೆರುವಾಯಿ ಮೂಲಕ ತಂಡವೊಂದು ಗೂಡ್ಸ್ ವಾಹನದಲ್ಲಿ ಐದು ಜಾನುವಾರುಗಳನ್ನು ಸಾಗಿಸುತ್ತಿತ್ತು. ಈ ವೇಳೆ ಮುಳಿಯ ಎಂಬಲ್ಲಿ ನಾಗರಿಕರ ತಂಡ ವಾಹನಕ್ಕೆ ತಡೆಯೊಡ್ಡಿದೆ. ಈ ವೇಳೆ ಜಾನುವಾರು ಸಾಗಾಟಗಾರರು ಹಾಗೂ ತಡೆದ ತಂಡದ ಮಧ್ಯೆ ಘರ್ಷಣೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ತಲುಪಿದ ವಿಟ್ಲ ಪೊಲೀಸರು ಎರಡು ತಂಡಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಜಾನುವಾರು ಸಾಗಾಟ ನಡೆಸಿದ ಆರೋಪದಂತೆ  ಬಾಕ್ರಬೈಲು ನಿವಾಸಿಗಳಾದ ಇಬ್ರಾಹಿಂ ಯಾನೆ ಮೋನು, ಮೂಸಾ, ಕನ್ಯಾನ ನಿವಾಸಿ ಹಮೀದ್ ಯಾನೆ ಜಲಾಲ್, ಸಾಲೆತ್ತೂರಿನ ಹಮೀದ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಜಾನುವಾರು ಸಾಗಾಟ ತಂಡಕ್ಕೆ ತಡೆಯೊಡ್ಡಿ ಹಲ್ಲೆಗೈದ ಆರೋಪದಂತೆ ಜಯಪ್ರಶಾಂತ, ಲಕ್ಷ್ಮೀಶ ಸಹಿತ ಐದು ಮಂದಿ ವಿರುದ್ಧವೂ ಕೇಸು ದಾಖಲಿಸಿರು ವುದಾಗಿ ತಿಳಿದು ಬಂದಿದೆ.

You cannot copy contents of this page