ಜಾಲತಾಣದ ಮೂಲಕ ಪರಿಚಯ: ಯುವತಿಯನ್ನು ಕರೆದುಕೊಂಡು ಹೋಗಿ ಚುಂಬನ, ವಂಚನೆ ದೂರು
ಕಾಸರಗೋಡು: ಸಾಮಾಜಿಕ ಜಾಲತಾಣದ ಮೂಲಕ ಪರಿಚ ಯಗೊಂಡ ಯುವತಿಯನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿ ಚುಂಬಿಸಿರುವುದಾಗಿಯೂ, ಸಾಲ ವಾಗಿ ಪಡೆದುಕೊಂಡ 1 ಪವನ್ ತೂಕದ ಚಿನ್ನದ ಬಳೆಯನ್ನು ಹಿಂತಿರುಗಿಸಲಿಲ್ಲವೆಂದು ಯುವತಿ ದೂರು ನೀಡಿದ್ದಾಳೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 23ರ ಹರೆಯದ ಯುವತಿ ದೂರುದಾತೆ. ಈಕೆ ನೀಡಿದ ದೂರಿನಂತೆ ರಾಜಪುರಂ ಪಾಣತ್ತೂರಿನ ಜಿತ್ತು ಎಂಬಾತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ.
ವಿವಾಹಿತನಾದ ಜಿತ್ತು ಎರಡು ಮಕ್ಕಳ ತಂದೆಯಾಗಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಗೊಂಡ ಬಳಿಕ ಯುವತಿಯನ್ನು ಬರಹೇಳಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗುವಾಗ ಚುಂಬಿಸಿರುವುದಾ ಗಿಯೂ, ಚಿನ್ನದ ಬಳೆಯನ್ನು ಸಾಲವಾಗಿ ಪಡೆದಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ.