ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣ ಉದ್ಘಾಟನೆ: ಉಚಿತ ಪುಸ್ತಕ, ಸಹಾಯ ಹಸ್ತ ವಿತರಣೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಇದರ ಆಶ್ರಯದಲ್ಲಿ ಜಿಲ್ಲಾ ಕುಲಾಲ ಸಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ ಜರಗಿತು.  ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25  ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ ಜರಗಿತು. ಬೆಳಗ್ಗೆ ಗಣಹೋಮ, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಭಜನಾ ತಂಡ ಮತ್ತು ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ತಂಡಗಳಿAದ ಭಜನೆ, ನಂದಗೋಕುಲ ಭಜನಾ ತಂಡ ತೂಮಿನಾಡು ಇವರಿಂದ ಕುಣಿತ ಭಜನೆ ನಡೆಯಿತು. ಸಭೆಯಲ್ಲಿ ಮÁಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.      
ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಪ್ರೇಮಾನಂದ ಕುಲಾಲ್ ಕೋಡಿಕಲ್ ಸಭಾಂಗಣ ವನ್ನು ಉದ್ಘಾಟಿಸಿದರು. ಮುಖ್ಯ ಅತಿ ಥಿಗಳಾಗಿ ಉದ್ಯಮಿ ಗಳಾದ ದಿವಾಕರ ಮೂಲ್ಯ. ಗಣೇಶ್ ಕುಲಾಲ್, ಅನಿಲ್ ದಾಸ್, ಜಿಲ್ಲಾ ಪಂಚಾಯತ್ ಸದಸೆÀ್ಯ ಕಮಲಾಕ್ಷಿ ವಿ. ಕುಲಾಲ್, ಜಯಂತಿ ಬದಿಯಡ್ಕ (ಕಾಸರಗೋಡು ಬ್ಲಾಕ್ ಪಂಚಾಯತ್ ಸದಸೆ್ಯ, ಮಾಲತಿ ಪಿ. (ಮುಖ್ಯೋಪಾಧ್ಯಾಯಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು), ಜಯಪ್ರಕಾಶ್ ಕೈರಂಗಳ ಸುಂದರ ಕುಲಾಲ್ ಶಕ್ತಿ ನಗರ, ದಾಮೋದರ ಅಶೋಕನಗರ, ಸುರೇಶ್ ಕುಲಾಲ್ ಭಾಗವಹಿಸಿದರು.
ಕರಾಟೆ ಪಟು ಕು.ಸ್ವಾತಿ ಕೊಡಂಗೆ, ಯಕ್ಷಗಾನ ಕಲಾವಿದ ಜಯೇಂದ್ರ ಕುಲಾಲ್ ಕಿದೂರು, ಸಮಾಜ ಸೇವೆಗಾಗಿ ಶ್ರೀ ರಾಮ ಪ್ರಸಾದ್ ಎಸ್ ಮಂಗಳೂರು, ದೇಶ ಸೇವಕ ಪೂವಪ್ಪ ಕಡಂಬಾರ್, ದೈವಾರಾದsಕ ಗೋಪಾಲಕೃಷ್ಣ ವಾಂತಿಚ್ಚಾಲ್, ಪ್ರಗತಿಪರ ಕೃಷಿಕ ಶೇಷ ಮೋಹನ್ ನೇರಪ್ಪಾಡಿ, ಎಸ್‌ಪಿಸಿ- ವಿದ್ಯಾರ್ಥಿ ಪೊಲೀಸ್ ಕೆಡೆಟ್ ನಲ್ಲಿ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ರಶ್ಮಿತ. ಕೆ ತೂಮಿನಾಡು, ಕೇರಳ ರಾಜ್ಯ ಮಟ್ಟದ ಜೂನಿಯರ್ ಗರ್ಲ್ಸ್ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಸೃಷ್ಟಿ ಕುಂಜತ್ತೂರು ಇವರನ್ನು ಗೌರವಿಸಲಾಯಿತು. ಆಶಕ್ತಕುಟುಂಬಕ್ಕೆ ನೀಡುವ ಕುಲಾಲ ಆಸರೆಯ ಸಹಾಯ ಹಸ್ತ ಯೋಜನೆ ರೂಪಾಯಿ 15,000  ಸುಂದರ ಮೂಲ್ಯ ಪೆರ್ಲ ರಿಗೆ ಮತ್ತು ದೇವದಾಸ್ ಮಂಜೇಶ್ವರ ಅಡ್ಕರಿಗೆ ಸ್ವಾಮೀಜಿಯವರು  ಹಸ್ತಾಂತರಿಸಿದರು. ಸುಮಾರು 375 ಮಂದಿ ವಿದ್ಯಾರ್ಥಿಗಳಿಗೆ ಉಚಿತಪುಸ್ತಕ ವಿತರಿಸಲಾಯಿತು.
2024-25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ 16ಮಂದಿ ವಿದ್ಯಾರ್ಥಿಗಳಿಗೆ  ಹಾಗೂ ಪ್ಲಸ್ ಟು /ಪಿ. ಯು. ಸಿ ಯ 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ದಾಮೋದರ ಮಾಸ್ಟರ್ ವಂದಿಸಿದರು. ಯನ್.ಕೆ. ಕುಲಾಲ್ ನಿರೂಪಿಸಿ ದರು.2025-27 ನೇ ಸಾಲಿನ ನೂತನ ಕಾರ್ಯ ಕಾರಿ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷ ರಾಗಿ ರಾಮ ಉಜಿರೆ,ಪ್ರಧಾನ ಕಾರ್ಯದರ್ಶಿ ಯಾಗಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಜತೆ ಕಾರ್ಯ ದರ್ಶಿಯಾಗಿ ಭೋಜ ಮಸ್ಟರ್ ಪಾವೂರು, ಕೋಶಾಧಿಕಾರಿಯಾಗಿ ಈಶ್ವರ್ ಕುಲಾಲ್ ಕಣ್ವತೀರ್ಥ, ಕ್ರೀಡಾ ಕಾರ್ಯದರ್ಶಿಯಾಗಿ ತಾರನಾಥ ಕಣ್ವತೀರ್ಥ, ಸಂಘಟನಾ ಸಂಚಾಲಕ ರಾಗಿ ಶ್ರೀ ಸುಧೀರ್ ರಂಜನ್ ದೈಗೋಳಿ ಹಾಗೂ ಜಯಂತ ಚಿಪ್ಪಾರ್,  ಸೇವಾ ದಳಪತಿಗಳಾಗಿ ಪ್ರಸಾದ್ ತುಮಿನಾಡು, ಸುರೇಶ್ ಕಣ್ವತೀರ್ಥ, ನ್ಯಾಯ ಸಲಹಾ ಮಂಡಳಿ ಸದಸ್ಯರಾಗಿ ಸೋಮಪ್ಪ ಸಾಲ್ಯಾನ್ ಕುಂಜತ್ತೂರು, ಬಾಲಕೃಷ್ಣ ಮುನ್ನಿಪ್ಪಾಡಿ, ವಿಶ್ವನಾಥ ಮಾಣಿ ಪ್ಪಾಡಿ ಹಾಗೂ ಇತರ 21 ಮಂದಿ ಸದಸ್ಯರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.

RELATED NEWS

You cannot copy contents of this page