ಜಿಲ್ಲಾ ಪಂ. ಅಧ್ಯಕ್ಷೆ ಭ್ರಷ್ಟಾಚಾರ ಆರೋಪ ಹೊರಿಸಿರುವ ಬೆನ್ನಲ್ಲೇ ಕಣ್ಣೂರು ಎ.ಡಿ.ಎಂ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಣ್ಣೂರು: ಕಣ್ಣೂರು ಜಿಲ್ಲಾ  ಪಂಚಾಯತ್ ಅಧ್ಯಕ್ಷೆ ಬೀಳ್ಕೊಡುಗೆ ಸಮಾರಂಭದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿದ ಬೆನ್ನಲ್ಲೇ ಕಣ್ಣೂರು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ (ಎಡಿಎಂ) ತಮ್ಮ ವಸತಿಯಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯಲ್ಲಿ   ಈ ಹಿಂದೆ ಎಡಿಎಂ ಆಗಿ ಸೇವೆ ಸಲ್ಲಿಸಿದ್ದು, ಈಗ ಕಣ್ಣೂರು ಜಿಲ್ಲೆಯ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದ ನವೀನ್‌ಬಾಬು ಕಣ್ಣೂರು ಪಳ್ಳಿಕುನ್ನಿನಲ್ಲಿರುವ ಅವರ ಕ್ವಾರ್ಟರ್ಸ್‌ನೊಳಗೆ ಇಂದು ಬೆಳಿಗ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈಗ ಕಣ್ಣೂರು ಎಡಿಎಂ ಆಗಿ ಸೇವೆ ಸಲ್ಲಿಸುತ್ತಿರುವ ನವೀನ್ ಬಾಬು ಅಲ್ಲಿಂದ ತಮ್ಮ ಹುಟ್ಟೂರಾದ ಪತ್ತನಂತ್ತಿಟ್ಟಕ್ಕೆ ವರ್ಗಾವಣೆಗೊಂ ಡಿದ್ದರು. ಈ ಮಧ್ಯೆ ಕಣ್ಣೂರು ಕಲೆಕ್ಟರೇಟ್‌ನಲ್ಲಿ ನಿನ್ನೆ ಸಂಜೆ ಅವರಿಗೆ ಬೀಳ್ಕೊಡುಗೆ  ಸಮಾರಂಭವನ್ನು ಏರ್ಪಡಿಸಲಾಗಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಪಿ.ಪಿ. ದಿವ್ಯಾ ರಿಗೆ ಆಹ್ವಾನ ನೀಡಿರಲಿಲ್ಲ. ಆದರೂ ಅವರು ಸಮಾರಂಭದಲ್ಲಿ ಭಾಗವಹಿಸಿ ಎಡಿಎಂ  ನವೀನ್ ಬಾಬುರ  ಅವರ ವಿರುದ್ಧ ಭ್ರಷ್ಟಾಚಾರ ಆರೋಪ  ಹೊರಿಸಿ ಮಾತನಾಡಿದ್ದರು.

ಕಣ್ಣೂರು ಜಿಲ್ಲೆಯ ಪೆಟ್ರೋಲ್ ಬಂಕ್‌ವೊಂದಕ್ಕೆ ಎನ್‌ಒಸಿ ನೀಡಲು ಅದರ ಮಾಲಕ ಕಣ್ಣೂರು ಕಲೆಕ್ಟರೇಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಎಡಿಎಂ ತಿಂಗಳುಗಳ ತನಕ ಪರಿಗಣಿಸದೆ ಬಳಿಕ ಪತ್ತನಂತ್ತಿಟ್ಟಕ್ಕೆ  ವರ್ಗಾವಣೆಗೊ ಳ್ಳುವ  ದಿನಗಳ ಹಿಂದೆಯಷ್ಟೇ   ಎನ್‌ಒಸಿ ನೀಡಿದ್ದರು. ಅದು  ಹೇಗೆ ನೀಡಲಾಯಿತು. ಅದರ ಹಿಂದೆ ನಡೆದ ವಿಷಯ ನನಗೆ ಚೆನ್ನಾಗಿಯೇ ತಿಳಿದಿದೆ. ಮುಂದಿನ ಎರಡು ದಿನಗಳೊಳಗಾಗಿ ನಾನು ಅದನ್ನು ಬಹಿರಂಗಪಡಿಸುವೆ ಎಂದು ಜಿಲ್ಲಾ  ಪಂಚಾಯತ್ ಅಧ್ಯಕ್ಷೆ ದಿವ್ಯ  ಆ ಕಾರ್ಯಕ್ರಮದಲ್ಲಿ ಹೇಳಿ ದ್ದರು. ನವೀನ್‌ಬಾಬು ಆ ವೇದಿಕೆಯಲ್ಲಿರುವ ವೇಳೆಯಲ್ಲೇ  ಅವರ ವಿರುದ್ಧ ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಭ್ರಷ್ಟಾಚಾರ ಆರೋಪ ಹೊರಿಸಿದ್ದರು.

ಕಾರ್ಯಕ್ರಮದ ನಂತರ ನವೀನ್‌ಬಾಬು   ತಮ್ಮ ಔದ್ಯೋಗಿಕ ವಾಹನದಲ್ಲಿ ಅಲ್ಲಿಂದ ಹಿಂತಿರುಗಿದ್ದರು. ದಾರಿ ಮಧ್ಯೆ ಕಾರು ನಿಲ್ಲಿಸುವಂತೆ  ಅವರು ಚಾಲಕನಲ್ಲಿ ತಿಳಿಸಿ ಕಾರಿನಿಂದ ಇಳಿದಿದ್ದಾರೆಂದು ಚಾಲಕ ತಿಳಿಸಿದ್ದಾರೆ. ನವೀನ್‌ಬಾಬು  ಇಂದು ಬೆಳಿಗ್ಗೆ ಪತ್ತನಂತಿಟ್ಟಕ್ಕೆ ತಲುಪಬೇಕಾಗಿತ್ತು.  ಅದಕ್ಕಾಗಿ ಅವರ ಮನೆಯವರು ಚೆಂಗನ್ನೂರು ರೈಲು ನಿಲ್ದಾಣದಲ್ಲಿ ನವೀನ್‌ಬಾಬುರಿಗಾಗಿ ಕಾದು ನಿಂತಿದ್ದರು. ಆದರೆ ನವೀನ್ ಬಾಬು ಆಗಮಿಸದೇ ಇದ್ದಾಗ ಮನೆಯವರು ಕಣ್ಣೂರು ಕಲೆಕ್ಟರೇಟ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ.  ಇದರಿಂದ ಅವರು ಕಣ್ಣೂರಿನಲ್ಲಿರುವ ಕ್ವಾರ್ಟರ್ಸ್‌ಗೆ ಹೋಗಿ ನೋಡಿದಾಗ ನವೀನ್‌ಬಾಬು ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪೊಲೀಸರು ಈ ಬಗ್ಗೆ ತನಿಖೆ  ಆರಂಭಿಸಿದ್ದಾರೆ. ಬೀಳ್ಕೊ ಡುಗೆ ಸಮಾರಂಭದಲ್ಲಿ ಜಿಲ್ಲಾ  ಪಂಚಾಯತ್ ಅಧ್ಯಕ್ಷೆ ಭ್ರಷ್ಟಾಚಾರ ಆರೋಪ ಹೊರಿಸಿರುವುದರಿಂದ ಮನನೊಂದು ನವೀನ್ ಬಾಬು ಆತ್ಮಹತ್ಯೆ ಗೈದಿರುವುದಾಗಿ ಹೇಳಲಾಗುತ್ತಿದೆ. ಇದು ಬಾರೀ ವಿವಾದಗಳಿಗೂ ದಾರಿ ಮಾಡಿ ಕೊಟ್ಟಿದೆ. ಮಾತ್ರವಲ್ಲದೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿರುದ್ಧ ವಿಪಕ್ಷಗಳು ಈಗ ರಂಗಕ್ಕಿಳಿದಿವೆ

You cannot copy contents of this page