ಜಿಲ್ಲಾ ಪೊಲೀಸ್ ಕೇಂದ್ರದ ಕ್ಯಾಂಟೀನ್ ನೌಕರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಜಿಲ್ಲಾ ಪೊಲೀಸ್‌ನ ಕೇಂದ್ರ ಕಚೇರಿಯ ಕ್ಯಾಂಟೀನ್ ನೌಕರನಾದ ಯುವಕ ಮನೆಯೊಶಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಕರಿಚ್ಚೇರಿ ಪೆರಳ ನಿವಾಸಿ ಕೆ. ಪದ್ಮಿನಿ ಎಂಬವರ ಪುತ್ರ ಕೆ. ಮನು ಕೃಷ್ಣನ್ (30) ಮೃತಪಟ್ಟ ಯುವಕ. ನಿನ್ನೆ ಸಂಜೆ ಮನೆಯೊಳಗೆ ಬೆಡ್‌ರೂಂನಲ್ಲಿ  ಪ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾ ಗಿದ್ದಾರೆ. ತಾಯಿ ಪದ್ಮಿನಿ ಹಾಗೂ ಮನು ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಪದ್ಮಿನಿ ಶುಕ್ರವಾರ ಸಂಜೆ ಸಂಬಂಧಿಕರ ಮನೆ ಸಮೀಪ ದೈವಮಹೋತ್ಸವಕ್ಕೆಂದು ತೆರಳಿದ್ದರು. ನಿನ್ನೆ ಸಂಜೆ ಮನೆಗೆ ಮರಳಿ ಬಂದಾಗ ಮನೆಯ ಬಾಗಿಲು ಮುಚ್ಚಿಕೊಂಡಿತ್ತು. ಹಲವು ಬಾರಿ ಬಾಗಿಲು ಬಡಿದರೂ ತೆರೆಯದ ಹಿನ್ನೆಲೆಯಲ್ಲಿ ಸ್ಥಳೀಯರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಮನು ಕೃಷ್ಣನ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೇಕಲ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಮನು ಕೃಷ್ಣನ್‌ರ ತಂದೆ ವಿಜಯನ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಸಹೋದರ ಕೆ. ಮಣಿಕಂಠನ್ (ಸೇನೆ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page