ಜಿಲ್ಲಾ ಮಟ್ಟದ ಆಲ್ ಎಂಪ್ಲೋಯೀಸ್ ಕ್ರಿಕೆಟ್ ಟೂರ್ನಮೆಂಟ್ ನಾಳೆ

ಮಂಜೇಶ್ವರ: ಕಿಂಗ್ ಮಾಸ್ಟರ್ ಕಾಸರಗೋಡು ಇದರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಆಲ್ ಎಂಪ್ಲೋಯೀಸ್ ಕ್ರಿಕೆಟ್ ಟೂರ್ನಮೆಂಟ್ ನಾಳೆ ಮೀಯಪದವು ಶಾಲಾ ಮೈದಾನದಲ್ಲಿ ಜರಗಲಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಕ್ರೀಡಾಂಗಣದ ಉದ್ಘಾಟನೆಯನ್ನು ಪಾತ್ರಿ ಭರತ್‌ರಾಜ್ ಕಟ್ಟೆಗೋಳಿ ನೆರವೇರಿಸುವರು. ಉದಯ ಸಾರಂಗ್ ಅಧ್ಯಕ್ಷತೆ ವಹಿಸುವರು. ಮಹಾಲಿಂಗೇಶ್ವರ ಮುಳ್ಳೇರಿಯ, ಇಸ್ಮಾಯಿಲ್ ಮಾಸ್ತರ್, ಪ್ರದೀಪ್ ಡಿಸೋಜಾ ಮೀಯಪದವು, ನಯನ್ ಕುಮಾರ್ ಕುಂಟಾರು, ಮಂಜುನಾಥ ಕಾರ್ಲೆ, ಪವನ್ ಕುಮಾರ್ ಹೊಸಂಗಡಿ, ರಾಜೇಶ್ ಮೊಂತೇರೊ, ಸುನಿಲ್ ಡಿಸೋಜ ಬಾಯಿಕಟ್ಟೆ, ಸಂಜೀವ ಮಾಸ್ತರ್, ಶ್ಯಾಮ್‌ರಂಜಿತ್, ಮಿಥುನ್ ಮಾಸ್ತರ್, ಪ್ರಿಜ್ಜು ಬಳ್ಳಾರ್, ರಾಜೇಶ್ ಕೊಡ್ಲಮೊಗರು ಉಪಸ್ಥಿತರಿರು ವರು. ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಕೂಡ್ಲು ಬಹುಮಾನ ವಿತರಿಸುವರು. ಕ್ರೀಡಾಕೂಟದ ವ್ಯವಸ್ಥಾಪಕ ಅಶೋಕ್ ಕೊಡ್ಲಮೊಗರು ಅಧ್ಯಕ್ಷತೆ ವಹಿಸುವರು.  ಸಿ.ಪಿ. ರಫೀಸ್ ಸುಲ್ತಾನ್, ಡಿಇಒ ಇಬ್ರಾಹಿಂ ಬುಡ್ರಿಯ, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಚಿತ್ರಾವತಿ ಟೀಚರ್ ಚಿಗುರುಪಾದೆ, ಉದಯ ಬೆದ್ರಡ್ಕ, ವಿಠಲ್ ನಾರಾಯಣ ಬಂಬ್ರಾಣ, ಮನೋಜ್, ಸಚಿನ್, ರವಿ ರಾವ್ ಮೀಯಪದವು, ತೌಸಿಫ್ ಉಪಸ್ಥಿತರಿರುವರು.

RELATED NEWS

You cannot copy contents of this page