ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರಕ್ಕೆ ದ್ವಿತೀಯ ಸ್ಥಾನ

ಕಾಸರಗೋಡು: ಮೂನಾಡ್ ಪೀಪಲ್ಸ್ ಕಾಲೇಜಿನಲ್ಲಿ ಜರಗಿದ 10ನೇ ಜಿಲ್ಲಾ ಯೋಗ ಚಾಂಪ್ಯನ್‌ಶಿಪ್‌ನಲ್ಲಿ ಅಷ್ಟಾಂಗ ಯೋಗ ಕೇಂದ್ರ ಸಮಗ್ರ ಚಾಂಪ್ಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಈ ಕೇಂದ್ರದ ಮಕ್ಕಳಾದ ಅಮನ್ ಎಂ. ಹುಡುಗರ ವಿಭಾಗ (8-10)ದಲ್ಲಿ ಪ್ರಥಮ ಸ್ಥಾನ, ವೃಶಾಂಕ್ ಕೆ.ಜಿ ದ್ವಿತೀಯ ಸ್ಥಾನ, ಹುಡುಗಿಯರ ವಿಭಾಗದಲ್ಲಿ ಆಧ್ವಿ ಬಿ.ಎಸ್. ಪ್ರಥಮ ಸ್ಥಾನ, ದಿಲ್ಮಾ ತೃತೀಯ, ಹುಡುಗರ ವಿಭಾಗದಲ್ಲಿ (10-12) ಧನ್ವಿತ್ ಶೆಟ್ಟಿ ಎ. ಪ್ರಥಮ, ಧ್ಯಾನ್‌ಜಿ ದ್ವಿತೀಯ, ನಂದಿತ್ ಆರ್. ತೃತೀಯ, ಹುಡುಗಿಯರ ವಿಭಾಗದಲ್ಲಿ (12-14) ಪೂರ್ಣಪ್ರಭು ಪ್ರಥಮ, ಅನುಷ್ಕ ಮಲ್ಯ ದ್ವಿತೀಯ, ಹುಡುಗರ ವಿಭಾಗದಲ್ಲಿ (12-14) ಅನ್ವಿತ್ ಶೆಟ್ಟಿ ಎ. ಪ್ರಥಮ ಸ್ಥಾನ ಪಡೆದಿರುತ್ತಾರೆ. ಆರ್ಟಿಸ್ಟಿಕ್ ಸೋಲೊ ಯೋಗ ಸ್ಪರ್ಧೆಯಲ್ಲಿ ಅನ್ವಿತ್ ಶೆಟ್ಟಿ ಎ. ಪ್ರಥಮ, ಆರ್ಟಿಸ್ಟಿಕ್ ಪೇರ್ ಹುಡುಗರ ವಿಭಾಗದಲ್ಲಿ ದ್ಯಾನ್ ಜಿ.,  ನಂದಿತ ಆರ್. ಪ್ರಥಮ, ಹುಡುಗಿಯರ ವಿಭಾಗದಲ್ಲಿ ಪೂರ್ಣಪ್ರಭು, ತೀರ್ಥ ಪ್ರಥಮ, ರಿತೆಮಿಕ್ ಫಯರ್ ಸ್ಪರ್ಧೆಯಲ್ಲಿ ನಿಹಾರಿಕ, ಹೃದ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಅಷ್ಟಾಂಗ ಯೋಗ ಕೇಂದ್ರದ ಶಿಕ್ಷಕ ಆಕಾಶಪದ್ಮ ತರಬೇತಿ ನೀಡಿದ್ದಾರೆ.

You cannot copy contents of this page