ಜಿಲ್ಲಾ ಶಾಲಾ ಕ್ರೀಡಾಕೂಟ ಇಂದು ಸಂಜೆ ಸಮಾಪ್ತಿ
ನೀಲೇಶ್ವರ: ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟ ನೀಲೇಶ್ವರ ಇಎಂಎಸ್ ಕ್ರೀಡಾಂಗಣದಲ್ಲಿ ನಡೆಯು ತ್ತಿದ್ದು ಇಂದು ಸಂಜೆ ಸಮಾಪ್ತಿಗೊಳ್ಳಲಿದೆ. ಕ್ರೀಡಾಕೂಟಕ್ಕೆ ನಿನ್ನೆ ಬೆಳಿಗ್ಗೆ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಎನ್. ನಂದಿ ಕೇಶನ್ ಧ್ವಜಾರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾ ಟಿಸಿದರು. ಏಷ್ಯನ್ ಯೂತ್ ಚಾಂಪಿ ಯನ್ ಶಿಪ್ ಹಾಗೂ ಕಾಮನ್‌ವೆಲ್ತ್ ಗೇಮ್ ಪದಕ ವಿಜೇತೆ ವಿ.ಎಸ್. ಅನುಪ್ರಿಯಾ ದೀವಟಿಗೆ ಪ್ರಜ್ವಲನೆಗೊಳಿ ಸಿದರು. ಹಲವು ಗಣ್ಯರು ಮಾತನಾಡಿ ದರು. ಇಂದು ಸಂಜೆ ನಡೆಯುವ ಸಮಾರೋಪವನ್ನು ರಾಜ್ಯ ಬಂದರು ಖಾತೆ ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸುವರು. ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಭಾಗವಹಿಸುವರು. ಹೊಸದುರ್ಗ ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಅಧ್ಯಕ್ಷತೆ ವಹಿಸುವರು.
ಜ್ಯೂನಿಯರ್ ಗಂಡು ಮಕ್ಕಳ ಜಾವೆಲಿನ್ ತ್ರೋದಲ್ಲಿ ನೀರ್ಚಾಲು ಎಂ.ಎಸ್.ಸಿ.ಎಚ್‌ಎಸ್‌ಎಸ್‌ನ ಜಿತಿನ್ ಡಿಸೋಜಾ ಚಿನ್ನದ ಪದಕ ಪಡೆದಿದ್ದಾರೆ. ಸೀನಿಯರ್ ಗಂಡು ಮಕ್ಕಳ ಶಾಟ್‌ಪುಟ್‌ನಲ್ಲಿ ಕುರುಡಪದವು ಕೆವಿಎಸ್‌ಎಂಎಚ್‌ಎಸ್‌ಎಸ್‌ನ ಸಿ.ಎಸ್. ಮುಹಮ್ಮದ್ ಮುತಾಹ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಜ್ಯೂನಿಯರ್ ಹೆಣ್ಮಕ್ಕಳ ಜಾವೆಲಿನ್ ತ್ರೋದಲ್ಲಿ ಕಾಸರಗೋಡು ಜಿ.ಎಂ.ಆರ್.ಎಸ್.ಎಸ್.ನ ಮಹಿತಾ ಮಾಧವನ್, ಜ್ಯೂನಿಯರ್ ಗಂಡು ಮಕ್ಕಳ ಟ್ರಿಪ್ಪಲ್ ಜಂಪ್‌ನಲ್ಲಿ ಮಂಗ ಲ್ಪಾಡಿ ಜಿಎಸ್‌ಎಸ್‌ಎಸ್‌ನ ಎ.ಕೆ. ಅನಸ್, ಸೀನಿಯರ್ ಹೆಣ್ಮಕ್ಕಳ ೧೫೦೦ ಮೀಟರ್ ಓಟದಲ್ಲಿ ಕಾಸರಗೋಡು ಜಿಎಂಆರ್‌ಎಚ್‌ಎಸ್ ಫಾರ್ ಗರ್ಲ್ಸ್‌ನ ಎಂ. ಅರುಣಿಕಾ, ಚಿನ್ನ ಗೆದ್ದಿ ದ್ದಾರೆ. ಪರವನಡ್ಕ ಜಿಎಂಆರ್‌ಎಚ್ ಎಸ್‌ನ ವಿ. ಶ್ರೀನಂದ, ಹೆಣ್ಮಕ್ಕಳ ಹೈಜಂಪ್, ಕುಟ್ಟಿಕ್ಕೋಲ್ ಎಯುಪಿಎಸ್‌ನ ಆಯಿಷತ್ ಅನ್ ಶತ್ ಶೆರೀನ್, ಸಬ್ ಜ್ಯೂನಿಯರ್ ಹೆಣ್ಣು ಮಕ್ಕಳ ಶಾಟ್‌ಫುಟ್‌ನಲ್ಲಿ ಪಾಣತ್ತೂರು ಜಿಎಚ್‌ಎಸ್‌ಎಸ್‌ನ ಎ.ವಿ. ಆದಿತ್ಯನ್ ಸಬ್ ಜ್ಯೂನಿಯರ್ ಹೈಜಂಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.
ಮೊದಲ ದಿನದ ಸ್ಪರ್ಧೆಯಲ್ಲಿ ೧೦೪ ಅಂಕಗಳೊಂದಿಗೆ ಚಿತ್ತಾರಿಕಲ್ ಶಿಕ್ಷಣ ಉಪ ಜಿಲ್ಲೆ ಅಗ್ರಸ್ಥಾನ ಪಡೆದರೆ, ೬೧ ಅಂಕಗಳೊಂದಿಗೆ ಚೆರುವತ್ತೂರು ಉಪಜಿಲ್ಲೆ, ೬೦ ಅಂಕಗಳೊಂದಿಗೆ ಹೊಸದುರ್ಗ, ೩೨ ಅಂಕಗಳೊಂದಿಗೆ ಕಾಸರಗೋಡು, ೨೪ ಅಂಕದೊಂದಗೆ ಕುಂಬಳೆ ಮತ್ತು ಮಂಜೇಶ್ವರ ಹಾಗೇ ೧೯ ಅಂಕದೊಂದಿಗೆ ಬೇಕಲ ಉಪಜಿಲ್ಲೆ ನಂತರದ ಸ್ಥಾನದಲ್ಲಿ ಮುಂದರಿದಿದೆ. ಕ್ರೀಡಾ ಸ್ಪರ್ಧೆಗಳು ಇಂದು ಬೆಳಿಗ್ಗೆ ಮತ್ತೆ ಮುಂದುವರಿಯುತ್ತಿದೆ.