ಬೋವಿಕ್ಕಾನ: ಕಾಸರಗೋಡು ಜಿಲ್ಲೆಯ ಜನವಾಸ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಉಪಟಳ ತೀವ್ರಗೊಂಡಿದ್ದರೂ ಜನರ ಜೀವ ಹಾಗೂ ಸೊತ್ತಿಗೆ ಸಂರಕ್ಷಣೆ ಒದಗಿಸುವಲ್ಲಿ ಸರಕಾರ ತೋರಿಸುವ ನಿರ್ಲಕ್ಷ್ಯವನ್ನು ಕೊನೆಗೊಳಿಸ ಬೇಕೆಂದು ಒತ್ತಾಯಿಸಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಇಂದು ಬೆಳಿಗ್ಗೆ ಬೋವಿಕ್ಕಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ದರು. 12 ಗಂಟೆಗಳ ಕಾಲ ನಡೆಯು ವ ಉಪವಾಸ ಮುಷ್ಕರವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾದಾಸ್ ಮುನ್ಶಿ ಉದ್ಘಾಟಿಸಿ ದರು. ಕೆ. ನೀಲಕಂಠನ್ ಅಧ್ಯಕ್ಷತೆ ವಹಿಸಿದರು. ನೇತಾರರಾದ ಮನ್ಸೂರ್ ಅಲಿ, ಸೋನಿ ಸೆಬಾಸ್ಟಿಯನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಕುಂಞಂಬು ನಂಬ್ಯಾರ್, ಎಂ.ಸಿ. ಪ್ರಭಾಕರನ್, ಕೆ.ಪಿ. ಪ್ರಕಾಶನ್, ಧನ್ಯಾ ಸುರೇಶ್, ಖಾದರ್ ಮಾಂಙಾಡ್, ಸಾಜಿದ್ ಮವ್ವಲ್, ಮಾಮುನಿ ವಿಜಯನ್, ಕಲ್ಲಗ ಚಂದ್ರಶೇಖರ ರಾವ್, ಪಿ.ವಿ. ಸುರೇಶ್, ಗೀತಾ ಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
