ಜಿಲ್ಲೆಯಲ್ಲಿ ವ್ಯಾಪಕ ಪೊಲೀಸ್ ಕಾರ್ಯಾಚರಣೆ : ಎಂಡಿಎಂಎ ಸಹಿತ ನಾಲ್ವರ ಸೆರೆ; ಎರಡು ಕಾರು ವಶ
ಕಾಸರಗೋಡು: ಜಿಲ್ಲೆಗೆ ಭಾರೀ ಪ್ರಮಾಣದಲ್ಲಿ ಮಾದಕದ್ರವ್ಯವಾದ ಎಂಡಿಎಂಎ ಹರಿದುಬರುತ್ತಿದ್ದು, ಅದನ್ನು ತಡೆಗಟ್ಟಲು ಪೊಲೀಸರು ಜಿಲ್ಲೆಯಾದ್ಯಂತ ವಾಗಿ ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದರಂತೆ ಪೊಲೀಸರು ಎರಡೆಡೆ ಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 58.950 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕಾರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೇಲ್ಪರಂಬ ಪೊಲೀಸರು ಮತ್ತು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯ ವಿಶೇಷ ತಂಡ ಡಾನ್‌ಸಾಫ್ ಜಂಟಿಯಾಗಿ ಪೊಯಿನಾಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಒಪಿ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೫೦ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಅಜಾನೂರು ಕಡಪ್ಪುರ ಮಿನಾಫೀಸ್ ಬಳಿಯ ಪಾಚಿಲ್ಲತ್ತ್ ಹೌಸ್‌ನ ಪಿ. ಅಬ್ದುಲ್ ಹಕ್ಕೀಂ (27), ಕುಂಬಳೆ ಕೊಪ್ಪಳ ಕುನ್ನಿಲ್ ಹೌಸ್‌ನ ಎ. ಅಬ್ದುಲ್ ರಾಶೀದ್ (29) ಮತ್ತು ಉದುಮ ಪಾಕ್ಯಾರ ಹೌಸ್‌ನ ಪಿ.ಎಚ್.ಅಬ್ದುಲ್ ರಹಿಮಾನ್ (29) ಎಂಬವರನ್ನು ಬಂಧಿಸಲಾಗಿದೆ. ಇದೇ ವೇಳೆ ಇವರ ಜತೆಗಿದ್ದ ಮೊಗ್ರಾಲ್ ಪುತ್ತೂರಿನ ಮೊಹಮ್ಮದ್ ಅಶ್ರಫ್ (25) ಎಂಬಾತ ತಪ್ಪಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತನ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಇನ್‌ಸ್ಪೆಕ್ಟರ್ ಎ. ಸುರೇಶ್ ಕುಮಾರ್ ನೇತೃತ್ವದ ಪೊಲೀಸರ ತಕಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳು ಬಂದಿದ್ದ ಕಾರಿನಲ್ಲಿ ಈ ಮಾಲು ಪತ್ತೆಯಾಗಿದೆಯೆಂದೂ ಇವರು ಕರ್ನಾಟಕದ ಸುಳ್ಯದಿಂದ ಬಂದಡ್ಕ ದಾರಿಯಾಗಿ ಬರುತ್ತಿದ್ದ ರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಬೇಕಲ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 8.950 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ಉದುಮ ಪಾಕ್ಯಾರ ಕುನ್ನಿನ ಕೆ. ಸರ್ಫಾಸ್ (29) ಎಂಬಾತನನ್ನು ಬಂಧಿಸಲಾಗಿದೆ.
ಆರಾಟುಕಡವು-ಪಾಲಕುನ್ನು ರಸ್ತೆಯ ಕಣ್ಣಂಗೋಳ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆಗೊಳ ಪಡಿಸಿದಾಗ ಆ ದಾರಿಯಾಗಿ ಆರೋಪಿ ಬರುತ್ತಿದ್ದ ಕಾರನ್ನ್ಲು ಪರಿಶೀಲಿಸಿದಾಗ ಅದರಲ್ಲಿದ್ದ ಆರೋಪಿಯ ಕೈವಶವಿದ್ದ ಎಂಡಿಎಂಎ ಪತ್ತೆಯಾಗಿದೆಯೆಂದೂ ಅದನ್ನು ಹಾಗೂ ಆತನ ಕೈವಶವಿದ್ದ 6000 ರೂ. ನಗದು, ಮೊಬೈಲ್ ಫೋನ್ ಮತ್ತು ಗುರುತುಹಚ್ಚುವ ಕಾರ್ಡ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.