ಜಿಲ್ಲೆಯಾದ್ಯಂತ ವ್ಯಾಪಕ ಕಳವು: ಮನೆ, ಜಿಲ್ಲಾ ನ್ಯಾಯಾಲಯ, ಬಿಎಸ್‌ಎನ್‌ಎಲ್ ಗೋದಾಮುನಿಂದ ಲೂಟಿ
ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿರುವಂತೆಯೇ ಕಳ್ಳರ ಹಾವಳಿಯೂ ತೀವ್ರಗೊಳ್ಳ ತೊಡಗಿದೆ. ರಾತ್ರಿ ವೇಳಗಳಲ್ಲಿ ಕಳವು ನಡೆಯುತ್ತಿದೆ. ವಿದ್ಯಾನಗರದಲ್ಲಿರುವ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ಕಳವು ಯತ್ನ ನಡೆದಿದೆ. ಜಿಲ್ಲಾ ನ್ಯಾಯಾಲಯದ ಎದುರುಗಡೆ ಗೇಟಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಳವಿಗೆ ಯತ್ನ ನಡೆಸಿದ್ದಾರೆ. ಬೀಗ ಒಡೆಯುವ ವೇಳೆ ವಾಚ್‌ಮ್ಯಾನ್ ಎಚ್ಚೆತ್ತು ನೋಡಿದಾಗ ಕಳ್ಳರು ತಮ್ಮ ಯತ್ನ ಉಪೇಕ್ಷಿಸಿ ಪರಾರಿಯಾಗಿದ್ದಾರೆ.
ಪೆರ್ಲ ಸಮೀಪದ ಶೇಣಿ ಮಣಿಯಂ ಪಾರೆಯ ಮನಾಸ್ ಮಂಜಿಲ್‌ನ ಬೀಫಾತಿಮತ್ ಸುನೈನಾ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು 9 ಗೋಣಿ ಚೀಲಗಳಲ್ಲಾಗಿ ತುಂಬಿಸಿಡಲಾಗಿದ್ದ ನಾಲ್ಕೂವರೆ ಕ್ವಿಂಟಾಲ್ ಅಡಕೆ, ಟಿ.ವಿ, ಟ್ಯಾಬ್, ವೈಫೈಕ್ಯಾಮರಾ, ಮೋಡಂ ಸೇರಿದಂತೆ ಎರಡು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ದೋಚಿದ್ದಾರೆ. ಕಳವು ನಡೆಯುವ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯವರು ಶನಿವಾರ ಬೀಗ ಜಡಿದು ಸಂಬಂಧಿಕರ ಮನೆಗೆ ಹೋಗಿ ದ್ದರು. ಅಲ್ಲಿಂದ ಹಿಂತಿರುಗಿ ಬಂದಾಗಲಷ್ಟೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಲಿ ತನಿಖೆ ಆರಂಭಿ ಸಿದ್ದಾರೆ. ಇದರ ಹೊರತಾಗಿ ಹೊಸದುರ್ಗ ಬಿಎಸ್‌ಎನ್‌ಎಲ್ ಟವರ್‌ನ ಕೇಂದ್ರದೊ ಳಗೆ ಇರಿಸಲಾಗಿದ್ದ 15 ಲಕ್ಷ ರೂ. ಮೌಲ್ಯದ 4-ಜಿ ಉಪಕರಣಗಳನ್ನು ಕದ್ದು ಸಾಗಿಸಿದ್ದಾರೆ. ಇದೆಲ್ಲವೂ 4-ಜಿ ಸಂಪರ್ಕ ಒದಗಿಸಲು ತಂದಿರಿಸಲಾಗಿದೆ ಉಪಕg ಣಗಳಾಗಿವೆ.
ಅದನ್ನು ಬಿಎಸ್‌ಎನ್‌ಎಲ್‌ನ ಸ್ಟೋರ್ ರೂಂನಲ್ಲಿ ದಾಸ್ತಾನು ಇರಿಸಲಾಗಿತ್ತು. ಅದೆಲ್ಲವನ್ನೂ ಕಳ್ಳರು ದೋಚಿದ್ದಾರೆ. ಈ ಬಗ್ಗೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಾಸರಗೋಡು, ನೀಲೇಶ್ವರದ ಕರುವಚ್ಚೇರಿಯ ಬಿಎಸ್‌ಎನ್‌ಎಲ್ ಟವರ್ ಪರಿಸರದಿಂದಲೂ ಕೆಲವು ದಿನಗಳ ಹಿಂದೆ ಬಿಎಸ್‌ಎನ್‌ಎಲ್ ಸಾಮಾಗ್ರಿಗಳನ್ನು ಕಳವುಗೈಯ್ಯಲಾಗಿತ್ತು. ಇದರ ಹೊರತಾಗಿ ನೀಲೇಶ್ವರ ಚಾಯಂಗೋಡ್‌ನ ಪವಿತ್ರನ್ ಎಂಬವರ ಅಂಗಡಿಯಿಂದಲೂ ಸುಮಾರು 2 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಆ ಬಗ್ಗೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.