ಜಿಲ್ಲೆಯ ಆರು ಕಡೆಗಳಲ್ಲಿ ಉಚಿತ ಡಯಾಲಿಸಿಸ್ ಸೌಕರ್ಯ
ಕಾಸರಗೋಡು: ಕಿಡ್ನಿ ರೋಗಿ ಗಳಿಗೆ ಡಯಾಲಿಸಿಸ್ ನಡೆಸಲು ಜಿಲ್ಲೆಯ ವಿವಿಧ ಬ್ಲೋಕ್, ನಗರಸಭೆಗಳಲ್ಲಾಗಿ ಆರು ಡಯಾಲಿಸಿಸ್ ಸೆಂಟರ್ ಕಾರ್ಯಾ ಚರಿಸುತ್ತಿದೆ. ಕಾಞಂಗಾಡ್ ಬ್ಲೋಕ್‌ನ ಪೆರಿಯ ಸಾಮಾಜಿಕ ಆರೋಗ್ಯ ಕೇಂದ್ರ ದಲ್ಲೂ, ನೀಲೇಶ್ವರ ನಗರಸಭೆಯಲ್ಲಿ ನೀಲೇಶ್ವರ ತಾಲೂಕು ಆಸ್ಪತ್ರೆಯಲ್ಲೂ, ಪರಪ್ಪ ಬ್ಲೋಕ್‌ನ ಪುಡಂಗಲ್ಲು ತಾಲೂಕು ಆಸ್ಪತ್ರೆಯಲ್ಲೂ, ಮಂಜೇಶ್ವರ ಬ್ಲೋಕ್‌ನ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲೂ, ಕಾರಡ್ಕ ಬ್ಲೋಕ್‌ನಲ್ಲಿ ಮುಳಿಯಾರು ಕುಟುಂಬಾರೋಗ್ಯ ಕೇಂದ್ರದಲ್ಲೂ, ಕಾಸರಗೋಡು ನಗರ ಸಭೆಯ ಜನರಲ್ ಆಸ್ಪತ್ರೆಯಲ್ಲೂ ಡಯಾಲಿಸೀಸ್ ಕೇಂದ್ರ ಕಾರ್ಯಾಚರಿಸುತ್ತಿದೆ. ಜಿಲ್ಲಾ ಪಂಚಾಯತ್, ಬ್ಲೋಕ್ ಪಂಚಾಯತ್, ನಗರಸಭೆ, ಗ್ರಾಮ ಪಂ.ಫಂಡ್ ಉಪಯೋಗಿಸಿ ಡಯಾಲಿಸಿಸ್ ಕೇಂದ್ರ ಕಾರ್ಯಾಚರಿಸುತ್ತಿದೆ.