ಜಿಲ್ಲೆಯ ಉತ್ತಮ ಕ್ಷೀರ ಸಂಘಗಳಿರುವ ಪ್ರಶಸ್ತಿ ವಿತರಣೆ
ಕಾಸರಗೋಡು: ಜಿಲ್ಲೆಯ ಆನಂದ್ ಮಾದರಿ ಕ್ಷೀರ ಸಂಘದ ಅಧ್ಯಕ್ಷರ ಸಭೆಯಲ್ಲಿ ವಿವಿಧ ಕ್ಷೀರ ಸಂಘಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಬ್ಡಾಜೆ ಕ್ಷೀರ ಸಂಘಕ್ಕೂ, ಉತ್ತಮ ಬಲ್ಕ್ ಮಿಲ್ಕ್ ಕಲರ್ ಪ್ರಶಸ್ತಿಯನ್ನು ವರ್ಕಾಡಿ ಸಂಘಕ್ಕೂ, ಹೆಚ್ಚು ಮಿಲ್ಮಾ ಉತ್ಪನ್ನಗಳನ್ನು ಮಾರಾಟ ಮಾಡಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಜತ್ತೂರು ಸಂಘಕ್ಕೂ ಹಸ್ತಾಂತರಿಸಲಾಯಿತು. ಈ ವೇಳೆ ಈ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಗಳಾದ ಫಾರೂಕ್, ವೇಣುಗೋಪಾಲ್ ಭಟ್ (ಕುಂಬ್ಡಾಜೆ), ಎನ್. ಕೃಷ್ಣ ಮೂರ್ತಿ, ವಿ. ಸೌಮ್ಯ (ವರ್ಕಾಡಿ), ಕೆ.ಕೆ. ಗಂಗಾಧರ, ಎನ್. ವಸಂತ (ಕುಂಜ ತ್ತೂರು), ಸದಸ್ಯರು ಉಪಸ್ಥಿತರಿದ್ದರು. ಜಿಲ್ಲೆಯ ಉತ್ತಮ ಕ್ಷೀರ ಸಂಘಕ್ಕಿರುವ ಪ್ರಶಸ್ತಿಯನ್ನು ಉದುಮ ಸಂಘ ಪಡೆದಿದೆ.
ಕಾರ್ಯಕ್ರಮವನ್ನು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಉದ್ಘಾಟಿಸಿದರು. ಮಿಲ್ಮಾ ನಿರ್ದೇಶಕ ಪಿ.ವಿ. ನಾರಾಯಣನ್, ಮಲಬಾರ್ ವಲಯ ಯೂನಿಯನ್ ನಿರ್ದೇಶಕ ಸುಧಾಕರನ್, ಜನರಲ್ ಮೆನೇಜರ್ ಕೆ.ಸಿ. ಜೇಮ್ಸ್ ಪ್ರಶಸ್ತಿ ವಿತರಿಸಿದರು. ಡಾ. ಪಿ. ಮುರಳಿ, ಮ್ಯಾಥ್ಯು ವರ್ಗೀಸ್, ಜಾರ್ಜ್ ಕುಟ್ಟಿ ಜೇಕಬ್, ಪಿ.ಎಂ. ಶಾಜಿ ಮಾತನಾಡಿದರು.