ಜಿಲ್ಲೆಯ ಪ್ರಥಮ ಸ್ಕೂಲ್ ಒಲಿಂಪಿಕ್ಸ್ ಮೋಡೆಲ್ ಸ್ಪರ್ಧೆಗಳಿಗೆ ನಾಳೆ ಚಾಲನೆ
ಕಾಸರಗೋಡು: ರಾಜ್ಯದಲ್ಲಿ ಇದೇ ಪ್ರಥಮವಾಗಿ ನಡೆಸಲಾಗುವ ಒಲಿಂಪಿಕ್ಸ್ ಮೋಡೆಲ್ ಕ್ರೀಡಾ ಸ್ಪಧಗಳು ನಾಳೆಯಿಂದ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ಆರಂಭಗೊಳ್ಳಲಿ ದೆ. ಶುಕ್ರವಾರ, ಶನಿವಾರ, ಸೋಮವಾರ ಎಂಬೀ ದಿನಗಳಲ್ಲಾಗಿ ನಡೆಯಲಿದೆ. ನಂತರದ ಸ್ಪರ್ಧೆಗಳು ಓಣಂ ರಜೆ ಬಳಿಕ ನಡೆಯಲಿದೆ. ಜಿಲ್ಲೆಯ ಏಳು ಶಿಕ್ಷಣ ಉಪಜಿಲ್ಲೆಗಳಿಂದಾಗಿ ಇದರಲ್ಲಿ 15,000 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಾಗಿ ಸ್ಪರ್ಧಿಸುವರು. ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಾಗಿ ಸ್ಪರ್ಧೆ ನಡೆಯಲಿದೆ.
ಜಿಲ್ಲಾ ಮಟ್ಟದ ಸ್ಪರ್ಧೆಗಳ ಆಧಾರದಲ್ಲಿ 2,168 ವಿದ್ಯಾರ್ಥಿಗ ಳನ್ನು ರಾಜ್ಯ ಮಟ್ಟದ ಒಲಿಂಪಿಕ್ಸ್ ಮೋಡೆಲ್ ಸ್ಪರ್ಧೆಗೆ ಆಯ್ಕೆ ಮಾಡ ಲಾಗುವುದು. ಇದರಲ್ಲಿ ಭಾಗವಹಿ ಸುವ ಸ್ಪರ್ಧೆಗಳ ಜೆರ್ಸಿ ಇತ್ಯಾದಿ ಸಹಾಯವನ್ನು ಜಿಲ್ಲಾ ಪಂಚಾಯತ್ ನೀಡಲಿದೆ.
ಸೀತಾಂಗೋಳಿಯ ಮುಗು, ಹೊಸ ದುರ್ಗ, ನೀಲೇಶ್ವರ ಮಿನಿ ಸ್ಟೇಡಿಯಂ, ನೀಲೇಶ್ವರ ಇಎಂಎಸ್ ಸ್ಟೇಡಿಯಂ, ಹೊಸದುರ್ಗ ಹೈಸ್ಕೂಲ್‌ಗಳು, ಕುಂ ಟಾರು ಜಿಯುಪಿ ಶಾಲೆ ಎಂಬಿಡೆಗಳ ಲ್ಲಾಗಿ ಸ್ಪರ್ಧೆಗಳು ನಡೆಯಲಿದೆ.