ಜೈಲಿನಿಂದ ಹೊರಬಂದ ನಾಲ್ಕು ದಿನಗಳಲ್ಲಿ ನಾಲ್ಕು ಕಳವು: ಆರೋಪಿಗಳು ಮತ್ತೆ ಸೆರೆ
ಮಂಗಳೂರು: ಜೈಲಿನಿಂದ ಹೊರಬಂದು ನಾಲ್ಕು ದಿನ ಕಳೆಯುವುದರೊಂದಿಗೆ ನಾಲ್ಕು ಕಡೆಗಳಲ್ಲಿ ಕಳ್ಳತನ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 6ರಂದು ಎರಡು ತಿಂಗಳ ಜೈಲುವಾಸ ಅನುಭವಿಸಿ ಹೊರಬಂದ ಚೆಂಬಗುಡ್ಡೆ ಪೆರ್ಮನ್ನೂರು ನಿವಾಸಿ ಹಬೀಬ್‌ಹಸನ್ ಯಾನೆ ಚೆಂಬಗುಡ್ಡೆ ಹಬೀಬ್ ಅಲಿಯಾಸ್ ಅಬ್ಬಿ (43) ಹಾಗೂ ಬಂಟ್ವಾಳ ಮಾಡ ಗ್ರಾಮದ ಉಮ್ಮರ್ ಶಿಯಾಫ್ (29) ಸೆರೆಯಾದವರು.
ಎರಡು ತಿಂಗಳ ಹಿಂದೆ ಮೂಡ ಬಿದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ೨ ಕಡೆ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಳವು ಮಾಡಿದ್ದ ಪ್ರಕರಣದಲ್ಲಿ ಸೆರೆಯಾಗಿ ಮಂಗಳೂರು ಜೈಲಿನಲ್ಲಿದ್ದರು. ಡಿ. ೬ರಂದು ಇವರು ಬಿಡುಗಡೆಗೊಂ ಡಿದ್ದರು. ಅಂದೇ ಮಂಗಳೂರು ಜೈಲಿನ ರಸ್ತೆಯ ಪರಿಸರದಿಂದ ಬೈಕ್ ಕಳವು ಮಾಡಿದ ಆರೋಪಿಗಳು ನರಿಂಗಾನ ತೌಡುಗೋಳಿ ಅಂಗನವಾಡಿ ಅಡುಗೆ ಸಹಾಯಕಿ ಸುಜಿನಾ ಡಿಸೋಜಾರ ಕುತ್ತಿಗೆಯಿಂದ ಚಿನ್ನದ ಸರ ಕಳವು ನಡೆಸಿದ್ದರು. ಮರುದಿನ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ್ದರು. ಎರಡು ದಿನ ಕಳೆದ ಬಳಿಕ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ನಿಲ್ಲಿಸಿದ್ದ ಇನ್ನೊಂದು ಬೈಕ್ ಕಳವು ಮಾಡಿದ್ದು, ಅದೇ ಬೈಕ್‌ನಲ್ಲಿ ತೆರಳಿ ಹಬೀಬ್ ಕಾರ್ಕಳದ ಮಹಿಳೆಯೋರ್ವರ ಕುತ್ತಿಗೆ ಯಿಂದ ಚಿನ್ನದ ಸರ ಕಳವು ನಡೆಸಿದಾ ನೆನ್ನಲಾಗಿದೆ. ಡಿ.೯ರಂದು ಕಾರ್ಕಳ ಮಂಜರಪಲ್ಕೆಯಲ್ಲಿ ವಸಂತಿ ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಈ ಆರೋಪಿಗಳು ಕಳವುಗೈದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದ ಮಧ್ಯೆ ಕಳ್ಳರ ಜಾಡು ಪೊಲೀಸರಿಗೆ ಲಭಿಸಿದೆ. ಆರೋಪಿಗಳು ಜೈಲಿನಿಂದ ಬಿಡುಗಡೆಗೊಂಡವರೆಂದು ತಿಳಿದು ಬಂದಿದ್ದು, ಇವರ ವಿರುದ್ಧ ಹಲವು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಮಂಗಳೂರು ಕಾರ್‌ಸ್ಟ್ರೀಟ್ ಬಳಿಯಿಂದ ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ.