ಜೈಶ್- ಎ ಮೊಹಮ್ಮದ್‌ನಿಂದ ಶ್ರೀರಾಮಮಂದಿರ ಸ್ಫೋಟ ಬೆದರಿಕೆ
ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಭವ್ಯವಾದ ಶ್ರೀರಾಮ ಮಂದಿರವನ್ನು ಸ್ಫೋಟಿ ಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ ಮೊಹಮ್ಮದ್ (ಜೆಇಎಂ) ಬೆದರಿಕೆಯೊಡ್ಡಿದೆ. ಈ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತನೋರ್ವ ಅಯೋಧ್ಯೆ ದೇವಾಲಯದ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಆಡಿಯೋ ಕ್ಲಿಪ್‌ನಲ್ಲಿ ಬೆದರಿಕೆ ಯೊಡ್ಡಿದ್ದಾನೆ. ದೇವಾಲಯವನ್ನು ನೆಲಸಮಗೊಳಿಸಬೇಕಾಗಿದೆ. ಅದರಂತೆ ಶ್ರೀರಾಮ ಕ್ಷೇತ್ರ ವನ್ನು ಬಾಂಬಿರಿಸಿ ಸ್ಫೋಟಿಸಲಾಗುವುದೆಂದು ಈ ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಬೆದರಿಕೆಯೊಡ್ಡಲಾಗಿದೆ. ಆಡಿಯೋ ಕ್ಲಿಪ್ ಹೊರಬಂದಾಕ್ಷಣದಿಂದ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ತೀವ್ರ ಜಾಗ್ರತೆ ಪಾಲಿಸತೊಡಗಿದೆ. ಶ್ರೀರಾಮ ಮಂದಿರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಮಾತ್ರವಲ್ಲ ಎಲ್ಲೆಡೆಗಳಲ್ಲಿ ಪೊಲೀಸರು ಕಟ್ಟೆಚ್ಚರ ಪಾಲಿಸತೊಡಗಿದ್ದಾರೆ.
ಜೆಇಎಂ ಅಯೋಧ್ಯೆಗೆ ನೇರ ಬೆದರಿಕೆಯೊಡ್ಡುತ್ತಿರುವುದು ಇದು ಮೊದಲ ಬಾರಿಯೇನಲ್ಲ. 2005 ಜುಲೈ 5ರಂದು ಅಂದಿನ ವಿವಾದಿತ ರಾಮಜನ್ಮಭೂಮಿ-ಬಾಬರಿ ಮಸೀದಿ ಸಂಕೀರ್ಣದ ಮೇಲೆ ಐವರು ಉಗ್ರರು ದಾಳಿ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಗಳೊಂದಿಗೆ ನಡೆದ ಘರ್ಷಣೆಯಲ್ಲಿ ಆ ಎಲ್ಲಾ ಐವರು ದಾಳಿಕೋರರನ್ನು ಗುಂಡಿಕ್ಕಿ ಕೊಲೆಗೈಯ್ಯಲಾಗಿತ್ತು. ಅದಾದ ಬಳಿಕ ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿಯೂ ಜೆಎಂಎ ಇಂತಹ ಬೆದರಿಕೆಯೊಡ್ಡಿತ್ತು. ಬೆದರಿಕೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಆಗಮಿಸುವ ಎಲ್ಲರನ್ನೂ ಭ ದ್ರತಾ ಪಡೆಗಳು ಮತ್ತು ಪೊಲೀಸರು ಬಿಗಿ ತಪಾಸಣೆಗೊಳ ಪಡಿಸಲು ತೊಡಗಿದ್ದಾರೆ.