ಝಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನ
ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಝಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಶಿಬು ಸೊರೇನ್ (81) ದೆಹಲಿಯ ಗಂಗಾರಾಂ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಈ ವೇಳೆ ಅವರ ಮಗ ಹಾಗೂ ಪ್ರಸ್ತುತ ಝಾರ್ಖಂಡ್ ಮುಖ್ಯಮಂತ್ರಿಯಾ ರುವ ಹೇಮಂತ್ ಸೊರೇನ್ ಆಸ್ಪತ್ರೆಯಲ್ಲಿದ್ದರು. ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದಾಗಿ ಜೂನ್ ಕೊನೆಯ ವಾರ ಶಿಬು ಸೊರೇನ್‌ರನ್ನು ಆಸ್ಪತ್ರೆಯಲ್ಲಿ ದಾಖಲಿಸರಾಗಿತ್ತು. ಅಗೋಸ್ತ್ 2ರಂದು ಅವರ ಆರೋಗ್ಯಸ್ಥಿತಿ ಗಂಭೀರವಾಸ್ಥೆಗೆ ತಲುಪಿ ಬಳಿಕ ವೆಂಟಿಲೇಟರ್‌ನಲ್ಲಿ ದಾಖಲಿಸಲಾ ಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಅವರು ಇಂದು ನಿಧನಹೊಂದಿದರೆಂ ದು ಟ್ವಿಟರ್‌ನಲ್ಲಿ ಅವರ ಪುತ್ರ ತಿಳಿಸಿದ್ದಾರೆ.
ಝಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ನೇತಾರನ ಆಗಿರುವ ಶಿಬು ಸೊರೇನ್ 38 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದರು. ಅಲ್ಲದೆ 3 ಬಾರಿ ಮುಖ್ಯಮಂತ್ರಿಯೂ ಆಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ 10 ದಿನಗಳ ಕಾಲ ಸೇವೆ ಸಲ್ಲಿಸಿದ್ದರೆ ನಂತರ 2008ರಿಂದ 2009ರ ವರೆಗೆ ಎರಡನೇ ಬಾರಿ, 2009ರಿಂದ 2010ರ ವರೆಗೆ ಮುಖ್ಯಮಂತ್ರಿಯಾಗಿದ್ದರು.