ಟಿ.ಪಿ. ರಾಮಕೃಷ್ಣನ್ ಸಿಐಟಿಯು ರಾಜ್ಯ ಅಧ್ಯಕ್ಷರಾಗಿ ಆಯ್ಕೆ

ತಿರುವನಂತಪುರ: ಸಿಐಟಿಯು ರಾಜ್ಯ ಅಧ್ಯಕ್ಷರಾಗಿ ಶಾಸಕ ಟಿ.ಪಿ. ರಾಮಕೃಷ್ಣನ್‌ರನ್ನು ನೇಮಿಸಲಾಗಿದೆ. ಪ್ರಸ್ತುತ ಸಂಘಟನೆಯ ರಾಜ್ಯ ಉಪಾಧ್ಯಕ್ಷರೂ, ಅಖಿಲ ಭಾರತ್ ವರ್ಕಿಂಗ್ ಕಮಿಟಿ ಸದಸ್ಯನಾಗಿರುವ ಇವರು ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಸದಸ್ಯರೂ, ಪಾರ್ಲಿಮೆಂಟರಿ ಪಾರ್ಟಿ ಕಾರ್ಯದರ್ಶಿಯೂ ಆಗಿದ್ದಾರೆ. ಪೇರಾಂಬ್ರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಥಮ ಪಿಣರಾಯಿ ವಿಜಯನ್ ಸರಕಾರದಲ್ಲಿ ಉದ್ಯೋಗ, ಅಬಕಾರಿ ಖಾತೆ ಸಚಿವರಾಗಿದ್ದರು.

You cannot copy contents of this page