ಟ್ಯಾಂಕರ್ ಲಾರಿಯಿಂದ ಅನಿಲ ಸೋರಿಕೆ: ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ
ಕಾಸರಗೋಡು: ಹೊಸದುರ್ಗ ಚಿತ್ತಾರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಟ್ಯಾಂಕರ್ ಲಾರಿಯಿಂದ ಇಂದು ಬೆಳಿಗ್ಗೆ ೭.೩೦ಕ್ಕೆ ದಿಢೀರ್ ಅನಿಲ ಸೋರಿಕೆ ಉಂಟಾಗಿ ತಕ್ಷಣ ಅಗ್ನಿಶಾ ಮಕದಳ ಸ್ಥಳಕ್ಕೆ ಆಗಮಿಸಿ ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಅವರಿಗೆ ಪೊಲೀಸರು ಅಗತ್ಯದ ನೆರವು ನೀಡಿದ್ದಾರೆ.
ಅನಿಲ ಸೋರಿಕೆ ಉಂಟಾದಾ ಕ್ಷಣ ಟ್ಯಾಂಕರ್ ಲಾರಿಯನ್ನು ರಸ್ತೆ ಬದಿಯಲ್ಲೇ ನಿಲ್ಲಿಸಲಾಯಿತು. ಆ ಪ್ರದೇಶದ ವಿದ್ಯುತ್ ಸಂಪರ್ಕ ವನ್ನು ವಿಚ್ಛೇಧಿಸಲಾಯಿತು. ಮಾತ್ರವಲ್ಲ್ಲ ಆ ಪರಿಸರದವರನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಯಿತು. ಈ ಟ್ಯಾಂಕರ್ ಲಾರಿ ಮಂಗಳೂರಿನಿಂದ ಅಡುಗೆ ಅನಿಲ ಹೇರಿಕೊಂಡು ಬರುತ್ತಿತ್ತು.
ಇದರಿಂದಾಗಿ ಕಾಸರಗೋಡಿನತ್ತ ಸಾಗುವ ವಾಹನಗಳನ್ನು ಹೊಸದುರ್ಗ ಟ್ರಾಫಿಕ್ ಜಂಕ್ಷನ್ ಮೂಲಕ ಹೊಸದುರ್ಗಕ್ಕೆ ಆಗಮಿಸುವ ವಾಹನಗಳನ್ನು ಚಾಮುಂಡಿಕುನ್ನು ಮೂಲಕ ಸಾಗುವಂತೆ ಮಾಡುವ ಕ್ರಮ ಕೈಗೊಳ್ಳಲಾಗಿದೆ.