ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದ ಮರದ ರೆಂಬೆ: ನಾಲ್ಕು ವಿದ್ಯುತ್ ಕಂಬಗಳು ನಾಶ

ಸೀತಾಂಗೋಳಿ: ಕಟ್ಟತ್ತಡ್ಕದಲ್ಲಿ ಆಲದ ಮರದ ರೆಂಬೆ ತುಂಡಾಗಿ ಟ್ರಾನ್ಸ್‌ಫಾರ್ಮರ್‌ನ ಮೇಲೆ ಬಿದ್ದಿದ್ದು ಇದರಿಂದ ನಾಲ್ಕು ವಿದ್ಯುತ್ ಕಂಬಗಳು ನಾಶಗೊಂಡಿವೆ.

ಇದರಿಂದ ಈ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆ ಎದುರಾಯಿತು. ಮೊನ್ನೆ ಸುರಿದ ಭಾರೀ ಮಳೆ ಹಾಗೂ ಗಾಳಿ ವೇಳೆ ಈ ಘಟನೆ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಇದು ಸಂಭವಿಸಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿದೆ.

ಟ್ರಾನ್ಸ್‌ಫಾರ್ಮರ್‌ನತ್ತ ಬಾಗಿ ನಿಂತ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಬೇಕೆಂದು ನಾಗರಿಕರು ಹಲವು ಬಾರಿ ಕೆಎಸ್‌ಇಬಿ ಅಧಿಕಾರಿಗಳಲ್ಲಿ ತಿಳಿಸಿದ್ದರ ಅದಕ್ಕೆ ಕ್ರಮ ಉಂಟಾಗಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ.

You cannot copy contents of this page