ಡಾಕ್ಟರೆಂದು ತಿಳಿಸಿ 4 ಯುವಕರ ವಿವಾಹವಾದ ಯುವತಿ ಸೆರೆ
ಚೆನ್ನೈ: ಡಾಕ್ಟರ್ ಎಂದು ಗುರುತಿಸಿ ಕೊಂಡು ನಾಲ್ಕು ಮಂದಿ ಯನ್ನು ವಿವಾಹವಾಗಿ ವಂಚಿಸಿದ ಯುವತಿ ಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಕೊಡಿಯಂಬಾಳಯಂ ನಿವಾಸಿ ಲಕ್ಷ್ಮಿ ಅಲಿಯಾಸ್ ನಿಶಾಂದಿ ಯನ್ನು ಸಿರ್ಕಾಶಿ ಪೊಲೀಸರು ಬಂಧಿಸಿ ದ್ದಾರೆ. ಈಕೆಯ ಪತಿ ೧೦ ವರ್ಷದ ಹಿಂದೆ ಮೃತಪಟ್ಟಿದ್ದರು. ಅದರ ಬಳಿಕ ತಾಯಿಯ ಜೊತೆ ವಾಸವಾಗಿದ್ದರು. 2017ರಿಂದ ಈಕೆ ವಿವಾಹ ವಂಚನೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಾಕ್ಟರ್‌ಆಗಿರುವು ದಾಗಿಯೂ, ಪತಿ ಮೃತಪಟ್ಟಿರುವುದಾ ಗಿಯೂ ತಿಳಿಸಿ ಯುವಕರನ್ನು ಸಮೀಪಿಸಿ ಅವರೊಂದಿಗೆ ಸ್ನೇಹ ಬೆಳೆಸಿ ಬಳಿಕ ವಿವಾಹವಾಗುವುದು ಈಕೆಯ ರೀತಿಯಾಗಿದೆ. ಅದರ ಬಳಿಕ ಕೆಲವೇ ದಿನಗಳೊಳಗೆ ಅವರನ್ನು ಬಿಟ್ಟು ಪರಾರಿಯಾಗುವುದು ಲಕ್ಷ್ಮಿಯ ರೀತಿಯಾಗಿದೆ. ಪುತ್ತೂರು ನಿವಾಸಿ ನೆಪೋಲಿಯನ್ ಚಿದಂಬರಂ, ಗೋಲ್ಡನ್ ನಗರ್‌ನ ರಾಜ, ಸಿರ್ಕಾಶಿ ನಿವಾಸಿ ಶಿವ ಚಂದ್ರನ್, ಸೇಲಂ ನಿವಾಸಿಯಾದ ಇನ್ನೋರ್ವ ಯುವಕ ಲಕ್ಷ್ಮಿಯ ವಂಚನೆಯ ಬಲೆಯಲ್ಲಿ ಸಿಲುಕಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದಾರೆ. ಸಿರ್ಕಾಶಿ ನಿವಾಸಿ ಶಿವಚಂದ್ರನ್‌ನೊಂದಿಗೆ ಕೈಗೊಂಡ ವಿವಾಹದ ಭಾವಚಿತ್ರಗಳನ್ನು ಸಾಮಾ ಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ಪುತ್ತೂರು ನಿವಾಸಿ ನೆಪೋಲಿಯನ್ ನೋಡಿ ದೂರು ನೀಡಿದ ಹಿನ್ನೆಲೆಯಲ್ಲಿ ಲಕ್ಷ್ಮಿಯ ವಂಚನೆ ಬಹಿರಂಗಗೊಂಡಿ ದ್ದು, ಈಕೆ ಪೊಲೀಸರ ಕೈವಶವಾಗಿದ್ದಾಳೆ.