ಡಾ. ಮನ್‌ಮೋಹನ್ ಸಿಂಗ್ ಅಂತ್ಯಕ್ರಿಯೆಗೆ ಕ್ಷಣಗಣನೆ: ಅಂತಿಮ ದರ್ಶನಕ್ಕೆ ಜನಸಾಗರ
ನವದೆಹಲಿ: ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ ಮಾಜಿ ಪ್ರಧಾನಮಂತ್ರಿ ಡಾ. ಮನ್‌ಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಗೆ ಕ್ಷಣಗಣನೆ ಆರಂಭಗೊಂ ಡಿದೆ. ದೆಹಲಿಯಲ್ಲಿರುವ ನಿಗಮ್ ಭೋದ್‌ಘಾಟ್‌ನಲ್ಲಿ ಇಂದು ಮಧ್ಯಾಹ್ನ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಂತಿಮ ವಿಧಿ ವಿಧಾನಗಳನ್ನು ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.
ಡಾ. ಮನ್‌ಮೋಹನ್ ಸಿಂಗ್‌ರ ಪಾರ್ಥಿವ ಶರೀರವನ್ನು ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕ ದರ್ಶನಕ್ಕಿರಿಸ ಲಾಯಿತು. ಗಣ್ಯರೂ ಸೇರಿದಂತೆ ಸಹಸ್ರಾರು ಮಂದಿ ಅಂತಿಮ ದರ್ಶನ ನಡೆಸಿದರು. ಡಾ. ಮನ್‌ಮೋಹನ್ ಸಿಂಗ್‌ರ ನಿಧನಕ್ಕೆ ವಿಶ್ವ ನಾಯಕರೂ ತೀವ್ರ ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡು ಅಂತ್ಯಕ್ರಿಯೆ ನಡೆಯುವ ನಿಗಮ್‌ಭೋ ದ್‌ನಲ್ಲಿ ಕೊನೆಗೊಂಡಿತು. ನಂತರ ಅಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನ ಕ್ರಮಗಳು ಆರಂಭಗೊಂಡಿತು.
ಇದೇ ವೇಳೆ ಡಾ. ಮನ್‌ಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಆಗ್ರಹಪಟ್ಟಿದ್ದಾರೆ. ಅವರ ಅಂತಿಮ ವಿಶ್ರಾಂತಿ ಸ್ಥಳದಲ್ಲೇ ಸ್ಮಾರಕ ನಿರ್ಮಿಸಬೇಕು. ಅದು ಭಾರತದ ಮಹಾನ್ ಪುತ್ರನ ಸ್ಮಾರಕದ ಪವಿತ್ರ ಸ್ಥಳವಾಗಲಿದೆ ಎಂದು ಖರ್ಗೆ ಹೇಳಿದ್ದಾರೆ.