ಡಾ. ರತ್ನಾಕರ ಮಲ್ಲಮೂಲೆ ಕಣ್ಣೂರು ವಿ.ವಿ ಸೆನೆಟ್ ಸದಸ್ಯರಾಗಿ ಆಯ್ಕೆ

ಕಾಸರಗೋಡು: ಕಣ್ಣೂರು ವಿವಿಯ ಸೆನೆಟ್‌ಗೆ ಚಾನ್ಸಲರ್ ಆರಿಫ್ ಮೊಹಮ್ಮದ್ ಖಾನ್ ಭಾಷಾ ಅಲ್ಪಸಂಖ್ಯಾತ ವಿಭಾಗದಿಂದ ಡಾ. ಎಂ. ರತ್ನಾಕರ ಮಲ್ಲಮೂಲೆಯ ವರನ್ನು ನಾಮನಿರ್ದೇಶಗೈದಿದ್ದಾರೆ.   ಒಟ್ಟು ೧೯ ಮಂದಿಯನ್ನು ರಾಜ್ಯಪಾಲರು ಆಯ್ಕೆ ಮಾಡಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ರಾಗಿರುವ ಡಾ. ರತ್ನಾಕರ ಮಲ್ಲಮೂಲೆ  ಕನ್ನಡ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಕಣ್ಣೂರು ವಿವಿ ರೂಪೀಕರಣಗೊಂಡ ಬಳಿಕ ಸೆನೆಟ್‌ನಲ್ಲಿ ಸ್ಥಾನ ಪಡೆಯುವ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಮಲ್ಲಮೂಲೆ ಪಾತ್ರರಾಗಿದ್ದಾರೆ.

You cannot copy contents of this page