ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ ಪಳ್ಳಿಯಿಲ್‌ವೀಡ್ ನಿಧನ

ಕಾಸರಗೋಡು: ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಲ್ಲೂರು ನಿವಾಸಿ ವಿನೋದ್ ಕುಮಾರ್ ಪಳ್ಳಿಯಿಲ್‌ವೀಡ್ (೫೮) ನಿಧನಹೊಂದಿದರು. ಇಂದು ಬೆಳಿಗ್ಗೆ ಮನೆಯಲ್ಲಿ ಕುಸಿದುಬಿದ್ದ ವಿನೋದ್ ಕುಮಾರ್ ರನ್ನು ತಕ್ಷಣ ಮಾವುಂಗಾಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಇವರು ಶಬರಿಮಲೆ ವ್ರತಧಾರಿಯಾಗಿದ್ದು, ಈ ತಿಂಗಳ ೧೮ರಂದು ಶಬರಿಮಲೆಗೆ ತೆರಳಲು ಅ ಗತ್ಯದ ತಯಾರಿಯಲ್ಲಿ ತೊಡಗಿದ್ದರು.

ವಿನೋದ್ ಕುಮಾರ್ ಈ ಹಿಂದೆ ಯೂತ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿಯೂ ಸೇವೆ ಸಲ್ಲಿಸಿದ್ದರು.

ಅವಿವಾಹಿತನಾಗಿರುವ ವಿನೋದ್ ಕುಮಾರ್ ಕಾಂಗ್ರೆಸ್ ನೇತಾರ ದಿ| ಕುಂಞಿಕಣ್ಣನ್ ನಂಬ್ಯಾರ್-ಸಾವಿತ್ರಿ ಅಮ್ಮ ದಂಪತಿಯ ಪುತ್ರನಾಗಿದ್ದಾರೆ. ಇವರು  ಸಹೋದರ ಪಿ.ವಿ. ಮನೋಜ್ ಕುಮಾರ್ (ಕರ್ನಾಟಕ ಬ್ಯಾಂಕ್ ಜನರಲ್ ಮೆನೇಜರ್) ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page