ಡೆಪ್ಯುಟಿ ತಹಶೀಲ್ದಾರ್ ಹಲ್ಲೆ ಪ್ರಕರಣ: ಶಾಸಕ ಅಶ್ರಫ್ ಸಹಿತ 3 ಮಂದಿಗೆ ಸಜೆ, ದಂಡ
ಮಂಜೇಶ್ವರ: 15 ವರ್ಷಗಳ ಹಿಂದೆ ಮಂಜೇಶ್ವರದಲ್ಲಿ ಡೆಪ್ಯುಟಿ ತಹಶೀಲ್ದಾರ್‌ರನ್ನು ತಡೆದು ಹಲ್ಲೆಗೈದ ಪ್ರಕರಣದಲ್ಲಿ ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್ ಮತ್ತು ಐಯುಎಂಎಲ್ ಕಾರ್ಯಕರ್ತರಾಗಿರುವ ಬಷೀರ್ ಅಬ್ದುಲ್ಲ ಖಾಜಿ, ಕಾಯಿಂಞಿ ಯಾನೆ ಅಬ್ದುಲ್ ಖಾದರ್‌ರಿಗೆ ಕಾಸರಗೋಡು ನ್ಯಾಯಾಲಯ ಸಜೆ ಹಾಗೂ ದಂಡ ವಿಧಿಸಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕ ಅಶ್ರಫ್ ತಿಳಿಸಿದ್ದಾರೆ. 3 ತಿಂಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ಪಾವತಿಸಲು ನ್ಯಾಯಾಲಯ ಆರೋಪಿಗಳಿಗೆ ಆದೇಶಿಸಿದ್ದು, ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ. ಎ.ಕೆ.ಎಂ. ಅಶ್ರಫ್ ಆಗ ಐಯುಎಂಎಲ್ ಕಾರ್ಯಕರ್ತರಾಗಿದ್ದರು.
ರಾಜೀನಾಮೆಗೆ ಆಗ್ರಹ
ನ್ಯಾಯಲಯದಿಂದ ಶಿಕ್ಷೆಗೊಳಗಾದ ಮಂಜೇಶ್ವರ ಶಾಸಕ ಮಂಜೇಶ್ವರಕ್ಕೆ ಅಪಮಾನವಾಗಿದ್ದು, ನೈತಿಕೆ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಆದರ್ಶ್ ಬಿ.ಎಂ. ಆಗ್ರಹಿಸಿದ್ದಾರೆ.