ಡ್ರೈವಿಂಗ್ ಟೆಸ್ಟ್‌ಗಳಿಗೆ ಇನ್ನು ಎಂ 80 ಬಳಕೆಯಿಲ್ಲ
ಕುಂಬಳೆ: ಡ್ರೈವಿಂಗ್ ಟೆಸ್ಟ್‌ಗಳಿಗೆ ಇನ್ನು ಮುಂದೆ ಎಂ 80 ಎಂಬ ಸ್ಕೂಟರ್ ಬಳಸುವಂತಿಲ್ಲವೆಂದು ಸಾರಿಗೆ ಇಲಾಖೆ ತಿಳಿಸಿದೆ. ಇದರಂತೆ ಕೇರಳದ ಎಲ್ಲಾ ಟೆಸ್ಟ್ ಮೈದಾನಗಳಿಂದ ಎಂ 80 ಸ್ಕೂಟರ್‌ಗಳನ್ನು ತೆರವುಗೊಳಿಸಲಾಗಿದೆ. ಡ್ರೈವಿಂಗ್ ಸ್ಕೂಲ್‌ಗಳಿಗೆ ಹಲವು ವರ್ಷಗಳಿಂದ ಗಿಯರ್ ಹೊಂದಿರುವ ಎಂ 80 ಎಂಬ ಸ್ಕೂಟರ್ ಬಳಸಲಾಗುತ್ತಿತ್ತು. ನೂತನ ಪರಿಷ್ಕಾರಗಳ ಅಂಗವಾಗಿ ಈ ಸ್ಕೂಟರ್‌ಗಳನ್ನು ಬಳಕೆಯಿಂದ ಹೊರತುಪಡಿಸಲಾಗಿದೆ.
ಕೈಯಲ್ಲಿ ಗಿಯರ್ ಇರುವ ಸ್ಕೂಟರ್‌ಗಳನ್ನು ಟೆಸ್ಟ್‌ಗಳಿಂದ ಹೊರತುಪಡಿಸಿ ಅದರ ಬದಲಿಗೆ ಕಾಲಿನಲ್ಲಿ ಗಿಯರ್ ಬದಲಾಯಿಸಬಹುದಾದ ವಾಹನಗಳನ್ನು ಮಾತ್ರವೇ ಇನ್ನು ಬಳಸಲಾಗುವುದು. ಕೈಯಲ್ಲಿ ಗಿಯರ್ ಹೊಂದಿದ ಸ್ಕೂಟರ್, ಮೋಟಾರ್ ಸೈಕಲ್‌ಗಳನ್ನು ಈಗ ಕಂಪೆನಿಗಳು ಬಿಡುಗಡೆ ಮಾಡುತ್ತಿಲ್ಲ. ಇದುವೇ ಪರಿಷ್ಕಾರದಲ್ಲಿ ಬದಲಾವಣೆ ತರಲು ಕಾರಣವೆಂದು ಸಾರಿಗೆ ಇಲಾಖೆ ತಿಳಿಸುತ್ತಿದೆ.