ತಂಗಅಂಗಿ ನಾಳೆ ಸನ್ನಿಧಾನಕ್ಕೆ
ಶಬರಿಮಲೆ: ಅರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಹೊರಟ ತಂಗಅಂಗಿ (ಚಿನ್ನದೊಡವೆ) ನಾಳೆ ಸನ್ನಿಧಾನಕ್ಕೆ ತಲುಪಲಿದೆ. ನಾಳೆ ಸಂಜೆ 6.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತಂಗಅಂಗಿ ತೊಡಿಸಿ ದೀಪಾರಾಧನೆ ನಡೆಯಲಿದೆ. 26ರಂದು ಮಧ್ಯಾಹ್ನ ಮಂಡಲಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತೀರ್ಥಾಟಕರ ಸಂಖ್ಯೆ ಯಲ್ಲಿ ಇನ್ನಷ್ಟು ಹೆಚ್ಚಳ ಕಂಡುಬಂ ದಿದೆ. ನಿನ್ನೆ ಹದಿನೆಂದು ಮೆಟ್ಟಿಲೇರಲು ಕಾದು ನಿಂತ ಭಕ್ತರ ಸರದಿ ಮರಕೂಟ್ಟಂವರೆಗೆ ಸಾಗಿತ್ತು.