ತಂಡಗಳ ಮಧ್ಯೆ ಘರ್ಷಣೆ ತಡೆಯಲೆತ್ನಿಸಿದ ಯುವಕನಿಗೆ ಹಲ್ಲೆ

ಸೀತಾಂಗೋಳಿ: ತಂಡಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದಾಗ ಅದನ್ನು ತಡೆಯಲೆತ್ನಿಸಿದ ಯುವಕನಿಗೆ ತಂಡ ಹಲ್ಲೆಗೈದು ಗಾಯಗೊಳಿಸಿದ ಘಟನೆ ನಡೆದಿದೆ. ಸೂರಂಬೈಲು ನಿವಾಸಿ ಅಜೇಶ್ (೩೭) ಎಂಬವರು ಗಾಯಗೊಂಡಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ ೮.೩೦ರ ವೇಳೆ ಸೀತಾಂಗೋಳಿ ಪೇಟೆಯಲ್ಲಿ ಘಟನೆ ನಡೆದಿದೆ. ಇಲ್ಲಿ ಎರಡು ತಂಡಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದವೆನ್ನಲಾಗಿದೆ. ಈ ವೇಳೆ ಘರ್ಷಣೆ ತಡೆಯಲೆತ್ನಿಸಿದ ಅಜೇಶ್‌ಗೆ ಹಲ್ಲೆ ನಡೆಸಲಾಗಿದೆ. ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದು ಚಾಕುವಿನಿಂದ ಕೈಗೆ ಇರಿದು ಗಾಯಗೊಳಿಸಿರುವುದಾಗಿ ಅಜೇಶ್ ದೂರಿದ್ದಾರೆ.

You cannot copy contents of this page