ತಂಡಗಳ ಮಧ್ಯೆ ಘರ್ಷಣೆ: 17 ಮಂದಿ ವಿರುದ್ಧ ಕೇಸು; ಓರ್ವ ಕಸ್ಟಡಿಗೆ
ಉಪ್ಪಳ: ಉದ್ಯಾವರ ಮಾಡದಲ್ಲಿ ನಿನ್ನೆ ಬೆಳಿಗ್ಗೆ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಗೆ ಸಂಬಂಧಿಸಿ 17 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಕಸ್ಟಡಿಗೆ ತೆಗೆಯಲಾಗಿದೆ. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ಮಾಡ ಬಿ.ಎಸ್.ನಗರ ರಸ್ತೆಯಲ್ಲಿ ಎರಡು ತಂಡಗಳು ಪರಸ್ಪರ ಘರ್ಷಣೆ ನಡೆಸಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಯಾಗಿತ್ತು. ವಿಷಯ ತಿಳಿದು ಪೊಲೀಸರು ತಲುಪಿ ತಂಡಗಳನ್ನು ಚದುರಿಸಿದ್ದಾರೆ. ಈ ವೇಳೆ ಮಾಡ ಬಿ.ಎಸ್.ನಗರದ ಮೊಹಮ್ಮದ್ ಬಿಲಾಲ್ (27) ಎಂಬಾತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಘರ್ಷಣೆನಿರತರಾದ ಇತರರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.