ತಂದೆಯನ್ನು ಕಡಿದು ಕೊಂದ ಪುತ್ರ

ವಯನಾಡ್: ತಂದೆಯನ್ನು ಮಗನೋರ್ವ ಕಡಿದು ಕೊಲೆಗೈದ ಘಟನೆ ವಯನಾಡ್ ಬಳಿ ನಡೆದಿದೆ. ವಯನಾಡ್ ಎಡವಕ ಡನ್ನಲಾಬ್‌ಕುನ್ನು ಮಲೇಕುಡಿಯರ ಬೇಬಿ (65) ಎಂಬವರು ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಪುತ್ರ ರೋಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.  ಇಂದು ಮುಂಜಾನೆ 1 ಗಂಟೆ ವೇಳೆ ಈ ಕೊಲೆ ಕೃತ್ಯ ನಡೆದಿದೆ. ನಿನ್ನೆ ರಾತ್ರಿಯಿಂದಲೇ ಮನೆಯಲ್ಲಿ ತಂದೆ, ಮಗನ ಮಧ್ಯೆ ಜಗಳ ಆರಂಭಗೊಂಡಿತ್ತೆನ್ನಲಾಗಿದೆ. ಈ ಮಧ್ಯೆ ಮಗ ತಂದೆಗೆ ಕಡಿದು ಗಾಯಗೊಳಿಸಿದ್ದನು. ಎದೆಗೆ ಆಳವಾದ ಗಾಯವುಂಟಾದ ಬೇಬಿಯನ್ನು ಮಾನಂತವಾಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿತ್ತು. ಅಲ್ಲಿಂದ ಕಲ್ಲಿಕೋಟೆ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಂತೆ  ಸಾವು ಸಂಭವಿಸಿದೆ.

Leave a Reply

Your email address will not be published. Required fields are marked *

You cannot copy content of this page