ತಂದೆ ಹಲ್ಲೆ ನಡೆಸಿರುವುದಾಗಿ ಏಳು ವರ್ಷದ ಬಾಲಕ ನೀಡಿದ ದೂರಿನಂತೆ ಪ್ರಕರಣ ದಾಖಲು
ಕಾಸರಗೋಡು: ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಏಳು ವರ್ಷದ ಬಾಲಕ ನೀಡಿದ ದೂರಿನಂತೆ ಬಾಲಕನ ತಂದೆ ವಿರುದ್ಧ ಕಾಸರಗೋ ಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನನ್ನ ತಂದೆ ಕೈಕಾಲುಗಳಿಗೆ ಹಲವು ಬಾರಿ ಹೊಡೆದಿದ್ದಾರೆಂದು ಆರೋಪಿಸಿ ಬಾಲಕ ತನ್ನ ತಾಯಿ ಜತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಅದರಂತೆ ಜುವೈನಲ್ ಜಸ್ಟೀಸ್ ಆಕ್ಟ್ ಪ್ರಕಾರ ಬಾಲಕನ ತಂದೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.