ತಮಿಳುನಾಡಿನಲ್ಲಿ ಮರ್ಯಾದೆ ಹತ್ಯೆ: ಐಟಿ ನೌಕರನನ್ನು ಕಡಿದು ಕೊಲೆ

ಚೆನ್ನೈ: ಅನ್ಯಜಾತಿಯ ಯುವತಿ ಯನ್ನು ಪ್ರೀತಿಸಿದ ಹೆಸರಲ್ಲಿ ೨೭ರ ಹರೆಯದ ದಲಿತ ಯುವಕನನ್ನು ಹಾಡ ಹಗಲೇ ಕಡಿದು ಕೊಲ್ಲಲಾಗಿದೆ. ತಮಿಳು ನಾಡು ತಿರುನಲ್ವೇಲಿ ಕೆಟಿಸಿ ನಗರದಲ್ಲಿ ಘಟನೆ ನಡೆದಿದೆ. ತೂತುಕುಡಿ ಜಿಲ್ಲೆಯ ಅರುಮುಗಮಂಗಳಂ ನಿವಾಸಿಯಾದ ಐಟಿ ನೌಕರ ಕೆವಿನ್ ಸೆಲ್ವಾ ಗಣೇಶ್‌ನನ್ನು ಕೊಲೆಗೈಯ್ಯಲಾಗಿದೆ. ಎಸ್. ಸುರ್ಜಿತ್ (23) ಎಂದು ಪರಿಚಯ ಗೊಂಡ ಯುವಕ ಆಯುಧದಿಂದ ಇರಿದಿದ್ದಾನೆನ್ನ ಲಾಗಿದೆ. ಆರೋಪಿಯ ಸಹೋದರಿಯನ್ನು ಕೆವಿನ್ ಹಲವು ಕಾಲದಿಂದ ಪ್ರೀತಿಸುತ್ತಿದ್ದಾ ನೆಂದು ಮಾಹಿತಿಯಿದೆ. ಕೆವಿನ್‌ನೊಂದಿಗಿ ರುವ ಸಂಬಂಧಕ್ಕೆ ಯುವತಿಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಯುವತಿಯ ಕುಟುಂಬ ಸದಸ್ಯರಿಂದ ಕೆವಿನ್‌ಗೆ ಬೆದರಿಕೆಯೂ ಇತ್ತೆನ್ನಲಾಗಿದೆ. ಈ ವಿಷಯ ಕೆವಿನ್ ತನ್ನ ಸಹೋದರನಲ್ಲಿ ತಿಳಿಸಿದ್ದನಾದರೂ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಆದಿತ್ಯವಾರ ಮಧ್ಯಾಹ್ನ ಅಜ್ಜನನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದ ಕೆವಿನ್ ಆಸ್ಪತ್ರೆಯ ಹೊರಗೆ ನಿಂತಿದ್ದಾಗ ಸುರ್ಜಿತ್ ಜಾತಿ ನಿಂಧನೆ ನಡೆಸಿ ಕಡಿದು ಕೊಲೆಗೈದಿ ದ್ದಾನೆನ್ನಲಾಗಿದೆ. ಯುವತಿಯ ಹೆತ್ತವರನ್ನು ಪ್ರಥಮ ಆರೋಪಿ ಗಳನ್ನಾಗಿ ಮಾಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page