ತಲಪಾಡಿಯಲ್ಲಿ 11,000 ಪ್ಯಾಕೆಟ್ ತಂಬಾಕು ಉತ್ಪನ್ನ ವಶ: ಇಬ್ಬರ ಬಂಧನ
ಮಂಜೇಶ್ವರ: ಕೇರಳದಲ್ಲಿ ಮಾರಾಟ ನಿಷೇಧಿಸಲಾದ ತಂಬಾಕು ಉತ್ಪನ್ನಗಳ ಸಹಿತ ಮಾದಕವಸ್ತುಗಳ ಸಾಗಾಟ ಇನ್ನಷ್ಟು ವ್ಯಾಪಕಗೊಂಡಿದೆ. ಈಗಾಗಲೇ ಹಲವು ಬಾರಿಯಾಗಿ ಭಾರೀ ಪ್ರಮಾಣದಲ್ಲಿ ಮಾದಕವಸ್ತು ಗಳನ್ನು ಜಿಲ್ಲೆಗೆ ಸಾಗಾಟ ಮಾಡುತ್ತಿ ದ್ದಾಗ ಅಧಿಕಾರಿಗಳು ವಶಪಡಿಸಿಕೊಂ ಡಿದ್ದಾರೆ. ಆದರೆ ಅವುಗಳ ಸಾಗಾಟ ಇನ್ನೂ ಮುಂದುವರಿದಿದೆ. ನಿನ್ನೆ ತಲಪ್ಪಾಡಿಯಲ್ಲಿ ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕರ್ನಾಟ ಕದಿಂದ ಇನ್ನೋವಾ ಕಾರಿನಲ್ಲಿ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದ ೧೧,೦೦೦ ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಇನ್ಸ್ಪೆಕ್ಟರ್ ಸುಮೇಶ್ರಾಜ್ರ ನೇತೃತ್ವದ ಪೊಲೀಸರು, ಕೇಂದ್ರ ಸೇನೆ ಒಳಗೊಂಡ ತಂಡ ತಲಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದರೂ ಅದರಲ್ಲಿ ತಂಬಾಕು ಉತ್ಪನ್ನಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿರುವುದು ಕಂಡುಬಂದಿದೆ. ಈ ಸಂಬಂಧ ನೆಕ್ರಾಜೆ ಬಾಲಡ್ಕ ಮೀತಲ್ ಹೌಸ್ನ ಮುಹಮ್ಮದ್ ಸಕೀರ್ (೨೭), ನೆಕ್ರಾಜೆ ಅನ್ಶಿದ್ ಮಂಜಿಲ್ನ ಅಬ್ದುಲ್ ಅಬ್ನಾಸ್ (೨೯) ಎಂಬಿವರನ್ನು ಬಂಧಿಸಲಾಗಿದೆ. ತಂಬಾಕು ಉತ್ಪನ್ನ ವಶ ಕಾರ್ಯಾಚರಣೆಯಲ್ಲಿ ಸಿಪಿಒಗಳಾದ ಸಜಿತ್, ಅರುಣ್, ವಿನೀತ್, ರಂಜಿತ್, ರೋಹಿತ್ ಎಂಬಿವರಿದ್ದರು.