ತಲಪ್ಪಾಡಿ ಗಡಿಯಲ್ಲಿ ಲಾಟರಿ ಮಾರಾಟ ಸ್ಟಾಲ್‌ಗಳ ತೆರವಿಗೆ ಯತ್ನ: ಮುಖಂಡರಿಂದ ತಡೆ
ತಲಪ್ಪಾಡಿ: ಕೇರಳ ಭಾಗದ ತಲಪ್ಪಾಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಲಾಟರಿ ಸ್ಟಾಲ್‌ಗಳನ್ನು ಬಲವಂತವಾಗಿ ತೆರವುಗೊಳಿಸಲು ಆಗಮಿಸಿದ ತಲಪ್ಪಾಡಿ ಟಾಲ್ ಸಿಬ್ಬಂದಿಗಳನ್ನು ತಡೆಯಲಾಯಿತು. ಕರ್ನಾಟಕ ಭಾಗದ ಟಾಲ್ ಸಿಬ್ಬಂದಿಗಳು ಕೇರಳ ಭಾಗದಲ್ಲಿದ್ದ ಲಾಟರಿ ಸ್ಟಾಲ್‌ಗಳನ್ನು ತೆರವುಗೊಳಿಸಲು ಉಳ್ಳಾಲ ಪೊಲೀಸರ ಸಹಾಯದಿಂದ ತಲುಪಿದಾಗ ಮುಖಂಡರ ನೇತೃತ್ವದಲ್ಲಿ ತಡೆಯೊಡ್ಡಲಾಗಿದೆ. ನಿನ್ನೆ ತಲಪ್ಪಾಡಿಯಲ್ಲಿ ನಡೆದ ಘಟನೆಗೆ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಪಂಚಾಯತ್ ಸದಸ್ಯ ಮುಸ್ತಫ ಉದ್ಯಾವರ ಮೊದಲಾದವರ ನೇತೃತ್ವದಲ್ಲಿ ತಡೆಯೊ ಡ್ಡಲಾಗಿದೆ. ಬಳಿಕ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಉಳ್ಳಾಲ ಪೊಲೀಸರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಲಾಗಿದೆ. ಮುಂದೆ ಕೇರಳ ಲಾಟರಿ ವ್ಯಾಪಾರಿಗಳಿಗೆ ಸಮಸ್ಯೆಯೊಡ್ಡಿದರೆ ಪಕ್ಷಾತೀತವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಮುಖಂಡರಾದ ಓಂಕೃಷ್ಣ, ಬಾಲಕೃಷ್ಣ ಶೆಟ್ಟಿಗಾರ್, ಪ್ರಶಾಂತ್ ಕನಿಲ, ವಿಜಯನ್, ಸುಕೇಶ್ ಬೆಜ್ಜ, ಶ್ರೀಧರ ಶೆಟ್ಟಿ ಭಾಗವಹಿಸಿದರು.