ಕಾಸರಗೋಡು: ಹಲವು ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಧಿಸಿದ್ದಾರೆ.
ಬದಿಯಡ್ಕ ಚೆನ್ನಡ್ಕ ನಿವಾಸಿ ಮೊಹಮ್ಮದ್ ಸುಹೈಲ್ (32) ಬಂಧಿತನಾದ ಆರೋಪಿ. ಕಾಸರಗೋಡು ಸ್ಪೆಷಲ್ ಪೊಲೀಸರ ತಂಡವು ಕಲ್ಲಿಕೋಟೆ ಕಣಿಚ್ಚಿರ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಜಿ. ದಿಲೀಪ್‌ರ ನೇತೃತ್ವದ ಪೊಲೀಸರ ಸಹಾಯದೊಂದಿಗೆ ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಆರೋಪಿ ಯನ್ನು ಕಲ್ಲಿಕೋಟೆಯಲ್ಲಿ ವಾಕೇರಿಯಲ್ಲಿ ಆತ ದುಡಿಯುತ್ತಿರುವ ಕೇಂದ್ರದಿಂದ ಬಂಧಿಸಲಾಗಿದೆ. ಬಂಧಿತನ ವಿರುದ್ಧ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳೂ ಸೇರಿದಂತೆ ಹಲವೆಡೆಗಳಲ್ಲಾಗಿ 16ರಷ್ಟು ಕೇಸುಗಳಿವೆ. 10 ಪ್ರಕರಣಗಳಲ್ಲಿ ಈತ ಶಿಕ್ಷೆಗೂ ಒಳಗಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.