ತಲೆಹೊರೆ ಕಾರ್ಮಿಕರ ಸಂರಕ್ಷಣೆಗೆ ಸರಕಾರ ಮುಂದಾಗಬೇಕು- ಬಿಎಂಎಸ್
ಕಾಸರಗೋಡು: ನಗರಗಳಲ್ಲೂ, ಗ್ರಾಮಗಳಲ್ಲೂ ಕೆಲಸ ಮಾಡುತ್ತಿರುವ ತಲೆಹೊರೆ ಕಾರ್ಮಿಕರನ್ನು, ಇವರ ಕೆಲಸವನ್ನು ಸಂರಕ್ಷಿಸಲು, ಪ್ರೋತ್ಸಾಹ ನೀಡಲು ಸರಕಾರ ಸಿದ್ಧವಾಗಬೇಕೆಂದು ಹೆಡ್‌ಲೋಡ್ ಆಂಡ್ ಜನರಲ್ ಮಜ್ದೂರ್ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್ ಆಗ್ರಹಿಸಿದರು. ಅಧ್ಯಕ್ಷ ವಿ.ವಿ. ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಶುಭ ಕೋರಿದರು. ಕೆಲಸದಿಂದ ೬೦ ವರ್ಷ ಪೂರ್ತಿಯಾಗಿ ನಿವೃತ್ತರಾಗುವ ಕಾರ್ಮಿಕರನ್ನು ಗೌರವಿಸಿ, ಚಟುವಟಿಕಾ ವರದಿಯನ್ನು ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಮಂಡಿಸಿದರು. ಕೋಶಾಧಿಕಾರಿ ದಿಲೀಪ್ ಡಿ’ಸೋಜಾ ಆರ್ಥಿಕ ವರದಿ ಮಂಡಿಸಿದರು. ಪ್ರದೀಪ್ ಕೇಳೋತ್ತ್ ಠರಾವು ಮಂಡಿಸಿದರು. ಕೆಲಸ, ಕೂಲಿಯನ್ನು ಸಂರಕ್ಷಿಸಬೇಕೆಂಬ ಠರಾವನ್ನು ಕೆ.ಬಾಬು ಮೋನ್ ಮಂಡಿಸಿದರು. ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಟಿ. ಕೃಷ್ಣನ್ ಸಮಾರೋಪ ಭಾಷಣ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಅಧ್ಯಕ್ಷರಾಗಿ ಕೆ.ವಿ. ಬಾಬು, ಉಪಾಧ್ಯಕ್ಷರಾಗಿ ಎಂ.ಕೆ. ರಾಘವನ್, ಶಿವಪ್ರಸಾದ್ ತಾಳಿಪಡ್ಪು, ಉಮೇಶ ಮಾನ್ಯ, ಭಾಸ್ಕರನ್ ಕೆ, ಪ್ರಧಾನ ಕಾರ್ಯದರ್ಶಿಯಾಗಿ ಪಿ. ದಿನೇಶ್, ಕಾರ್ಯದರ್ಶಿಗಳಾಗಿ ರವಿ ವೈ, ಸೂರ್ಯಕುಮಾರ್ ಕುಬಣೂರು, ಅನೀಶ್ ಪರಕ್ಲಾಯಿ, ನಾರಾಯಣನ್ ಪರವನಡ್ಕ, ಜಿತಿನ್ ಬಾಬು, ಕೋಶಾಧಿಕಾರಿಯಾಗಿ ದಿಲೀಪ್ ಡಿ’ಸೋಜಾ ಕುದ್ರೆಪ್ಪಾಡಿ ಆಯ್ಕೆಯಾದರು. ಪಿ. ದಿನೇಶ್ ಸ್ವಾಗತಿಸಿ, ಎಂ.ಕೆ. ರಾಘವನ್ ವಂದಿಸಿದರು.