ತಾಯಿಯನ್ನು ಉಸಿರುಗಟ್ಟಿಸಿ ಕೊಲೆಗೈಯ್ಯಲೆತ್ನ: ಪುತ್ರನ ವಿರುದ್ಧ ಕೇಸು
ಕಾಸರಗೋಡು: ತಾಯಿಗೆ ಹಲ್ಲೆಗೈದು ಉಸಿರುಗಟ್ಟಿಸಿ ಕೊಲೆಗೈ ಯ್ಯಲು ಯತ್ನಿಸಿದ ಆರೋಪದಂತೆ ಮಗನ ವಿರುದ್ಧ ಪೊಲೀಸರು ನರಹ ತ್ಯಾಯತ್ನ ಕೇಸು ದಾಖಲಿಸಿಕೊಂ ಡಿದ್ದಾರೆ.
ಕೂಡ್ಲು ಪೆರ್ನಡ್ಕದ ಕೆ. ಮಾಲಿನಿ (47) ಎಂಬವರು ನೀಡಿದ ದೂರಿನಂತೆ ಪುತ್ರ ವಿನಾಯಕ (29)ನ ವಿರುದ್ದ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಕಳೆದ ಸೋಮವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದೆ. ಅಂದು ಮನೆಯಲ್ಲಿ ವಿನಾಯಕ ತಾಯಿಯೊಂ ದಿಗೆ ಹಣ ಕೇಳಿದ್ದಾನೆನ್ನಲಾಗಿದೆ. ಆದರೆ ತಾಯಿ ಹಣ ನೀಡದಿದ್ದಾಗ ಆಕೆಯನ್ನು ಅವಾಚ್ಯವಾಗಿ ನಿಂದಿಸಿ ಬೆತ್ತದಿಂದ ಹಲ್ಲೆಗೈದು ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಕೊಲೆಗೈಯ್ಯಲೆತ್ನಿ ಸಿರುವುದಾಗಿ ಪೊಲೀಸರು ದಾಖಲಿಸಿ ಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.