ತಾಯಿಯನ್ನು ಕೊಲೆಗೈದ ಆರೋಪಿಯನ್ನು ಮನೆಗೆ ತಲುಪಿಸಿ ಮಾಹಿತಿ ಸಂಗ್ರಹ
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಯಲ್ಲಿ ದಿ| ಲೂಯಿಸ್ ಮೊಂತೆರೋರ ಪತ್ನಿ ಹಿಲ್ಡಾ ಮೊಂತೆರೋ (60 )ಎಂಬವರನ್ನು ಕಿಚ್ಚಿಟ್ಟು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾದ ಪುತ್ರ ಮೆಲ್ವಿನ್ ಮೊಂತೆರೋ (33)ನನ್ನು ಪೊಲೀಸರು ನಿನ್ನೆ ಆತನ ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಿದರು. ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್, ಎಎಸ್‌ಐ ಮಧುಸೂದನನ್, ಸಿಪಿಒ ಧನೇಶ್ ಎಂಬಿವರ ನೇತೃತ್ವದಲ್ಲಿ ಮೆಲ್ವಿನ್‌ನನ್ನು ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ. ತಾಯಿಯನ್ನು ಹೊಡೆದು ಕೊಲೆಗೈಯ್ಯಲು ಬಳಸಿದ ಮರದ ಬೆತ್ತವನ್ನು ಮನೆಯ ಬಳಿಯಿಂದ ಪತ್ತೆಹಚ್ಚಲಾಯಿತು.
ಕಳೆದ ಗುರುವಾರ ಮುಂ ಜಾನೆ ಆರೋಪಿ ತನ್ನ ತಾಯಿ ಯನ್ನು ಹೊಡೆದು ಕೊಲೆಗೈದ ಬಳಿಕ ಕಿಚ್ಚಿಟ್ಟು ಮೃತದೇಹ ವನ್ನು ಮನೆಯ ಸಮೀಪದ ಪೊದೆಗಳೆಡೆ ಉಪೇಕ್ಷಿಸಿದ್ದನು. ಅನಂತರ ತಾಯಿಗೆ ಸೌಖ್ಯವಿಲ್ಲ ವೆಂದು ತಿಳಿಸಿ ನೆರೆಮನೆ ನಿವಾಸಿ ಯಾದ ಲೋಲಿಟ ಎಂಬವನ್ನು ಮನೆಗೆ ಕರೆದೊಯ್ದು ಅವರ ಮೇಲೂ ಹಲ್ಲೆಗೈದಿದ್ದನು. ಬಳಿಕ ಓಡಿ ಪರಾರಿಯಾದ ಆರೋಪಿ ಯನ್ನು ಮಂಜೇಶ್ವರ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾ ಚರಣೆಯಲ್ಲಿ ಕರ್ನಾಟಕದ ಬೈಂದೂರಿನಿಂದ ಪತ್ತೆಹಚ್ಚಿ ಬಂಧಿಸಿದ್ದರು. ಬಳಿಕ ರಿಮಾಂಡ್ ನಲ್ಲಿದ್ದ ಆರೋಪಿಯನ್ನು ಹೆಚ್ಚಿನ ತನಿಖೆಯಂಗವಾಗಿ ಪೊಲೀ ಸರು ಕಸ್ಟಡಿಗೆ ತೆಗೆದುಕೊಂಡಿದ್ದರು.