ತಿರುವನಂತಪುರದಲ್ಲಿ ಅಮೀಬಿಕ್ ಮೆದುಳು ಜ್ವರ ಭೀತಿ

ತಿರುವನಂತಪುರ: ತಿರುವನಂ ತಪುರದಲ್ಲಿ ಅಮೀಬಿಕ್ ಮೆದುಳು ಜ್ವರ ವ್ಯಾಪಕಗೊಂಡಿರುವುದಾಗಿ ವರದಿಯಾಗಿದೆ. ಕಳೆದ ತಿಂಗಳ ೨೩ರಂದು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟ ಯುವಕನಿಗೆ ಅಮೀಬಿಕ್ ಮೆದುಳು ಜ್ವರ ಬಾಧಿಸಿತ್ತೆಂದು ಸಂಶಯಿಸಲಾಗಿದೆ. ಇದೇ ವೇಳೆ ಇದೇ ರೀತಿಯ ರೋಗ ಲಕ್ಷಣಗಳುಳ್ಳ ಆರು ಮಂದಿಯನ್ನು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ. ಇವರ ರಕ್ತ ಸ್ಯಾಂಪಲ್ ತಪಾಸಣೆ ಇಂದು ನಡೆಯಲಿದೆ. ಇವರು ಸ್ನಾನ ಮಾಡಿದ ಕೊಳಕ್ಕೆ ಯಾರೂ ಇಳಿಯದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page