ತಿರುವನಂತಪುರದಲ್ಲಿ ಮೇಳೈಸಿದ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ

ಕುಂಬಳೆ: ದಕ್ಷಿಣ ಭಾರತದ ಭಾಷೆಗಳ ಪ್ಯೆಕಿಕನ್ನಡ ಭಾಷೆ, ಸಂಸ್ಕೃತಿಗೆ ಮಹತ್ತರ ಸ್ಥಾನವಿದೆ. ಭಾಷಾ ವ್ಯೆರುಧ್ಯಗಳಿಲ್ಲದೆ ಎಲ್ಲರನ್ನೂ ಸ್ವೀಕರಿ ಸುವ, ಬೆಂಬಲಿಸುವ ಮನೋಭಾವ ನಮ್ಮಲ್ಲಿರಬೇಕು. ತನ್ಮೂಲಕ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯಎಂದು ಕೇರಳ ಸರ್ಕಾರದ ಬಂದರು, ಪುರಾತತ್ವ ಇಲಾಖೆ ಸಚಿವ ಕಡನ್ನಪ್ಪಳ್ಳಿ ರಾಮಚಂದ್ರನ್‌ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿP Àಅಕಾಡೆಮಿ ಕಾಸರಗೋಡು, ಕರ್ನಾಟಕ ಗಡಿ ಪ್ರದೇಶಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರ ಗೋಡು, ಭಾರತ ಭವನ, ತಿರುವನಂ ತಪುರಂ ಕೇರಳ ಸರ್ಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತಿರುವನಂತ ಪುರದ ಭಾರತ್ ಭವನದಲ್ಲಿ ಆಯೋ ಜಿಸಿದ್ದ ಅನಂತಪುರಿ ಗಡಿಕನ್ನಡ ಸಂಸ್ಕೃತಿ ಉತ್ಸವದಲ್ಲಿ ಮುಖ್ಯ ಅತಿಥಿ ಯÁಗಿ ಸಚಿವರು ಮಾತನಾಡಿದರು.
ಕಾಸರಗೋಡು ಹಾಗೂ ತಮ್ಮ ಸಂಬAಧಗಳ ಬಗ್ಗೆ ನೆನಪಿಸಿಕೊಂಡ ಸಚಿವರು, ಗಡಿತಾಲೂಕು ಮಂಜೇಶ್ವರದ ಭಾಷಾ ವೈವಿಧ್ಯ, ಸ್ನೇಹಪ್ರಿಯಜನರ ವಿವಿಧ ಕ್ಷೇತ್ರಗಳ ಸಾಧಕ ಜೀವನದ ಬಗ್ಗೆ ನೆನಪಿಸಿದರು. ತುಳು ಭಾಷೆ-ಸಂಸ್ಕೃತಿ ನ್ನನ್ನನ್ನು ಕುತೂಹಲಿಗನಾಗಿಸಿತ್ತು ಎಂದರು.
ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಉದ್ಘಾ ಟಿಸಿ ಮಾತನಾಡಿ, ಒಳನಾಡಿಗಿಂತ ಗಡಿನಾಡು-ಹೊರನಾಡಿನ ಕನ್ನಡಿಗರಲ್ಲಿ ಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚು ಒಲವು ಸಹಜವಾಗಿ ಕಂಡು ಬರುತ್ತದೆ. ಪ್ರಾಚೀನ ಕನ್ನಡ ಭಾಷೆ-ಪರಂಪರೆಯ ಗಾಢ ಪ್ರಭಾವದ್ರಾವಿಡ ಭಾಷೆಗಳಲ್ಲಿ ಕಂಡುಬರುತ್ತದೆ. ಇಲ್ಲಿಯ ಶಾಸನ, ತಾಳೆಯೋಲೆಗಳು ಕನ್ನಡದ ಸುಧೀರ್ಘ ಪರಂಪರೆಯನ್ನು ಸಾರಿ ಹೇಳುತ್ತದೆ ಎಂದರು.
ಗಡಿನಾಡು ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಸಂಸ್ಥಾಪಕ ಎಸ್. ಪ್ರದೀಪ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ದ್ದರು. ಕರ್ನಾಟಕಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರ್, ಕರ್ನಾಟಕಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಕರ್ನಾಟಕ ಸರ್ಕಾರದ ಭೂನ್ಯಾಯ ಮಂಡಳಿ ಸದಸ್ಯ ಗಿರೀಶ್ ಶೆಟ್ಟಿ ಎಂ., ಕಾಸರ ಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ತಿರುವನಂತಪುರದ ಮಾಧ್ವ ಮಹಿಳಾ ಮಂಡಳಿ ಅಧ್ಯಕ್ಷೆ ಡಾ. ರುಕ್ಮಿಣಿ. ಕೆ, ತಿರುವನಂತಪುರ ಕರ್ನಾಟಕ ಸಂಘದ ಕಾರ್ಯದರ್ಶಿ ಡಾ. ಅನಿತ ಕುಮಾರಿ ಹೆಗಡೆ, ವಾಮನ ರಾವ್‌ಬೇಕಲ, ಗಣೇಶ್ ಪ್ರಸಾದ್ ಪಾಣೂರು, ಹರಿನಾರಾಯಣ ಸಿರಂತಡ್ಕ, ಸೂರ್ಯನಾರಾಯಣ ಕುಂಜುರಾಯ, ಪ್ರೊ.ಎ.ಶ್ರೀನಾಥ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ದ್ಧರು. ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕಸ್ವಾಗತಿಸಿ, ಕಾರ್ಯದರ್ಶಿ ಅಖಿಲೇಶ್ ನಗುಮುಗಂ ವಂದಿಸಿ ದರು. ಈ ಸಂದರ್ಭ ವಿವಿಧ ವಲಯ ಗಳ ಸಾಧಕರಾದ ರೆ.ಫಾ. ಬಾಸಿಲ್ ವಾಸ್, ಪ್ರೊ.ಸ್ಟೀಫನ್ ಕ್ವೊಡ್ರೋಸ್, ಶ್ರೀಜಿತ್ ಶ್ರೀಧರ್, ಡಾ.ರತ್ನಾಕರ ಮಲ್ಲಮೂಲೆ, ಡಾ.ಶಕೀರಲಿ ಕೆ.ಎ., ಪತ್ರಕರ್ತ ಗಂಗಾಧರ ತೆಕ್ಕೇಮೂಲೆ, ಅಸ್ಲಂ ಕುಂಜತ್ತೂರುರನ್ನು ಸನ್ಮಾನಿಸಲಾಯಿತು.
ಬಳಿಕ ರಾಜಶ್ರೀ ಟಿ.ರೈ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಪರಿಣಿತರವಿ ಎಡನಾಡು ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ಸಂಜೆ ಕರ್ನಾಟಕಜಾನಪದ ಪರಿಷತ್ತು ಕೇಂದ್ರ ಘಟಕದ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಕೇರಳ ಆಹಾರ, ನಾಗರಿಕ ಪೂರೈಕೆ ಸಚಿವ ಜಿ.ಆರ್.ಅನಿಲ್ ಸಾಧಕ ಪುರಸ್ಕಾರ ಪ್ರದಾನಗೈದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರಜೆ.ಎಸ್.ಸದಸ್ಯೆ ಆಯಿಷಾ ಎ.ಎ.ಎ.ಪೆರ್ಲ ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸಿದ್ದರು.
ಈ ಸಂದಭÀðಮಿತ್ರ ಬಳಗ ಬೆಳ್ಳೂರು ಸಹಿತ ವಿವಿಧ ತಂಡಗಳಿAದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಗಡಿನಾಡಜನರ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page