ತೆಂಗಿನಕಾಯಿ ಹೆಕ್ಕಲು ಹೋದ ವ್ಯಕ್ತಿ ನಾಗರಹಾವು ಕಡಿದು ಮೃತ್ಯು
ಪೈವಳಿಕೆ: ತೆಂಗಿನ ಕಾಯಿ ಹೆಕ್ಕಲು ಹೋದ ವ್ಯಕ್ತಿ ನಾಗರಹಾವು ಕಡಿದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುರುಡಪದವು ಪಾರೆಕೋಡಿ ನಿವಾಸಿ ಕೃಷ್ಣಪ್ಪ ಮೂಲ್ಯ (72) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ಸಂಜೆ 4.30ರ ವೇಳೆ ಇವರು ಮನೆ ಬಳಿ ತೆಂಗಿನ ಮರದಿಂದ ಬಿದ್ದ ಕಾಯಿ ಹೆಕ್ಕಲು ಹೋಗಿದ್ದ ವೇಳೆ ನಾಗರ ಹಾವು ಕಡಿದಿದೆ ಎನ್ನಲಾಗುತ್ತಿದೆ. ಕೂಡಲೇ ಅವರನ್ನು ಉಪ್ಪಳದ ಆಸ್ಪತ್ರೆಗೆ ತಲುಪಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಕೊಂಡೊ ಯ್ದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಲ್ಲಿರಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂ ತರಿಸಲಾಗುವುದು.
ದಿ| ಮುಂಡಪ್ಪ ಮೂಲ್ಯ-ಸೀತಾ ದಂಪತಿಯ ಪುತ್ರನಾದ ಮೃತರು ಪತ್ನಿ ರತ್ನಾವತಿ, ಮಕ್ಕಳಾದ ಪ್ರೇಮ, ವಾರಿಜ, ಜನಾರ್ದನ, ಸುಜಾತ, ಅಳಿಯಂದಿರಾದ ಗೋಪಾಲಕೃಷ್ಣ, ಚಂದ್ರಶೇಖರ, ಕರುಣಾಕರ, ಸಹೋದರ-ಸಹೋದರಿಯರಾದ ನಾರಾಯಣ, ಸುಂದರ, ಯಮುನಾ, ಕಮಲ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಸಹೋದರಿ ವೆಂಕಮ್ಮ ಈ ಹಿಂದೆ ನಿಧನರಾಗಿದ್ದಾರೆ.