ತೆಂಗಿನಕಾಯಿ ಹೆಕ್ಕುತ್ತಿದ್ದಾಗ ಬಾಂಬ್ ಸ್ಫೋಟಗೊಂಡು ವೃದ್ಧ ಮೃತ್ಯು
ತಲಶ್ಶೇರಿ: ಜನವಾಸವಿಲ್ಲದ ಮನೆ ಹಿತ್ತಿಲಿನಲ್ಲಿ ತೆಂಗಿನಕಾಯಿ ಹೆಕ್ಕಲು ಹೋದ ವೃದ್ಧ ಬಾಂಬ್ ಸ್ಫೋಟ ಗೊಂಡು ಮೃತಪಟ್ಟ ಘಟನೆ ನಡೆದಿದೆ. ಎರಂಞೋಳಿ ಕುಡಕ್ಕುಳಂ ಪಂಚಾಯತ್ ಕಚೇರಿ ಸಮೀಪದ ಮನೆ ಹಿತ್ತಿಲಿನಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆ ಘಟನೆ ನಡೆದಿದೆ.
ಎರಂಞೋಳಿ ವಾಡಿಯಿಲ್ ಪೀಡಿಗ ಕುಡಕ್ಕುಳಂ ರೋಡ್ ನಿಡುವೋಟ್‌ಕಾವ್ ಎಂಬಲ್ಲಿಗೆ ಸಮೀಪದ ಅಯಾನಿಯೂಟ್ ಮೀತಲ್ ವೇಲಾಯುಧನ್ (85) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಹಿತ್ತಿಲಿನಲ್ಲಿ ತೆಂಗಿನಕಾಯಿ ಹೆಕ್ಕುತ್ತಿ ದ್ದಾಗ ಬಿದ್ದು ಸಿಕ್ಕಿದ ಸ್ಟೀಲ್ ಪಾತ್ರೆಯನ್ನು ತೆರೆಯಲೆತ್ನಿಸಿದಾಗ ಅದು ಸ್ಫೋಟಗೊಂ ಡಿತ್ತು. ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ನೋಡಿದಾಗ ವೇಲಾಯು ಧನ್ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ವೇಲಾಯುಧನ್‌ರ ಜೀವ ರಕ್ಷಿಸಲಾಗಲಿಲ್ಲ.
ವೇಲಾಯುಧನ್‌ರ ಮನೆ ಹಿತ್ತಿಲಿನಲ್ಲಿ ಈ ಘಟನೆ ನಡೆದಿದೆ. ಈ ಬಾಂಬ್ ಅಲ್ಲಿ ಯಾರು ಉಪೇಕ್ಷಿಸಿದ್ದಾರೆಂಬ ಬಗ್ಗೆ ಪೊಲೀಸರು ತನಿಖ ನಡೆಸುತ್ತಿದ್ದಾರೆ. ತಲಶ್ಶೇರಿ, ನ್ಯೂಮಾಹಿಠಾಣೆ ವ್ಯಾಪ್ತಿಯಲ್ಲಿ ಬಾಂಬ್ ಸ್ಕ್ವಾಡ್ ಇತ್ತೀಚೆಗೆ ತಪಾಸಣೆ ನಡೆಸಿತ್ತು. ಇದನ್ನು ತಿಳಿದ ವ್ಯಕ್ತಿಗಳು ಈ ಬಾಂಬ್ ಬೇರೆಡೆಗೆ ಕೊಂಡೊಯ್ದು ಬಚ್ಚಿಟ್ಟಿರ ಬಹುದೆಂದು ಸಂಶಯಿಸಲಾಗಿದೆ. ಬಾಂಬ್ ಸ್ಫೋಟಗೊಂಡ ಸ್ಥಳ ಹಾ ಗೂ ಸಮೀಪದ ಮನೆಯಲ್ಲಿ ಪೊಲೀ ಸರು ಶೋಧ ನಡೆಸಿದರೂ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಲಾಗಲಿಲ್ಲ.