ತೆಂಗಿನಮರದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಕಾರ್ಮಿಕ ಮೃತ್ಯು
ಕುಂಬಳೆ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರ್ಮಿಕ ಮೃತಪಟ್ಟರು. ಬಂಬ್ರಾಣ ಅಂಡಿತ್ತಡ್ಕ ತಾರಿಗುಡ್ಡೆಯ ಮದರ ಎಂಬವರ ಪುತ್ರ ಜನಾರ್ದನ (48) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ತೆಂಗಿನ ಮರವೇರುವ ಕಾರ್ಮಿಕರಾಗಿದ್ದಾರೆ. ಈ ತಿಂಗಳ ೧೫ರಂದು ಬಂಬ್ರಾಣದ ಮೂವಂ ಎಂಬಲ್ಲಿನ ವ್ಯಕ್ತಿಯೋರ್ವರ ತೋಟದಲ್ಲಿ ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಆಯತಪ್ಪಿ ಮರದಿಂದ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆಯ ಆಸ್ಪತ್ರೆಗೂ, ಅನಂತರ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ, ತಾಯಿ ಭಾಗಿ, ಪತ್ನಿ ಯಮುನ, ಮಕ್ಕ ಳಾದ ದೀಕ್ಷಿತ, ಅರ್ಪಿತ, ಅಭಿಷೇಕ್, ಸಹೋದರ-ಸಹೋದರಿಯರಾದ ಸುಂದರ, ಶಿವರಾಮ, ಸುಮತಿ, ಗಿರಿಜಾ, ಅಮಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.