ತೆಂಗಿನ ಮರದಿಂದ ಬಿದ್ದು ಬೀಡಿ ಕಾರ್ಮಿಕ ಮೃತ್ಯು
ಕಾಸರಗೋಡು: ತೆಂಗಿನ ಮರದಿಂದ ಬಿದ್ದು ಬೀಡಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಅಚ್ಚಾಂ ತುರುತ್ತಿ ನಿವಾಸಿ ಆರಿಲ್ ಪ್ರೇಮರಾಜನ್ (58) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಘಟನೆ ನಡೆದಿದೆ. ಮನೆ ಹಿತ್ತಿಲಿನ ತೆಂಗಿನ ಮರಕ್ಕೆ ಹತ್ತಿದ ಇವರು ಆಯ ತಪ್ಪಿ ಬಿದ್ದದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಆರಿಲ್ ಮಲಪ್ಪಿಲ್ ಅಂಬು-ಮಾಣಿಕ್ಯ ದಂಪತಿಯ ಪುತ್ರನಾದ ಮೃತರು ಪತ್ನಿ ಉಷಾ, ಮಕ್ಕಳಾದ ಅಖಿಲ, ಅಶಿತ, ಸಹೋದರ-ಸಹೋದರಿಯರಾದ ಸಿದ್ದಾರ್ಥನ್, ಸುಪ್ರಿಯ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.