ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ನಡಾವಳಿ ಮಹೋತ್ಸವ: ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಮುಂ ದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ನಡಾವಳಿ ಉತ್ಸವ ಹಾಗೂ ಬ್ರಹ್ಮಕಲ ಶೋತ್ಸವದ ಪೂರ್ವ ಭಾವಿಯಾಗಿ ಸ್ವಾಗತ ಸಮಿತಿ ರೂಪೀ ಕರಣ ಸಭೆ ಕ್ಷೇತ್ರದ ಕಲ್ಯಾಣ ಮಂಟಪ ದಲ್ಲಿ ನಿನ್ನೆ ಜರಗಿತು.

ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕೋಟೆಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಚ್ಚಮ್ಮಾರ್, ಮಡಯನ್, ಮೂತಚೆಟ್ಟಿ ಯಾರ್ ಸಹಿತ ಹಲವರು ಉಪಸ್ಥಿತ ರಿದ್ದರು. ಮೂತಚೆಟ್ಟಿಯಾರ್ ರಾಘವ ಮಾಯಿಪ್ಪಾಡಿ, ಕೆ.ಎನ್. ಕಮ ಲಾಕ್ಷನ್, ನಾರಾಯಣ ವಡಕ್ಕೇವೀಡ್ ಸಲಹೆಗಳನ್ನು ನೀಡಿದರು. ಪದಾಧಿ ಕಾರಿಗಳಾಗಿ ಕಾವುಮಠ ಬ್ರಹ್ಮಶ್ರೀ ವಿಷ್ಣುಪ್ರಸಾದ್, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ (ಪ್ರಧಾನ ಗೌರವಾಧ್ಯಕ್ಷರು), ಪಿ. ದಾಮೋದರ, ಕೆ.ಟಿ. ದಾಮೋದರನ್, ಎ.ಕೇಶವನ್, ಕಮಲಾಕ್ಷನ್, ಗೋಕುಲ್‌ದಾಸ್, ಡಾ| ಮಂಜುನಾಥ ಶೆಟ್ಟಿ (ಗೌರವಾಧ್ಯಕ್ಷರು), ನಾರಾಯಣ ವಡಕ್ಕೇವೀಡ್ (ಅಧ್ಯಕ್ಷ), ಕೆ.ಎನ್. ಕಮಲಾಕ್ಷನ್ (ಪ್ರಧಾನ ಕಾರ್ಯ ದರ್ಶಿ), ಪವನ್ ಕುಮಾರ್ (ಕೋಶಾ ಧಿಕಾರಿ) ಆಯ್ಕೆಯಾದರು. ಟಿ.ಪಿ. ವಿಜಯನ್ ಸ್ವಾಗತಿಸಿ ವಿ.ಕೆ. ಕೇಶವ ವಂದಿಸಿದರು.

You cannot copy contents of this page