ತೋಟಗಾರಿಕಾ ನಿಗಮದ ಔಟ್‌ಲೆಟ್ ಸ್ಟೋರ್ ಬೆಂಕಿಗಾಹುತಿ
ಬೋವಿಕ್ಕಾನ: ರಾಜ್ಯ ತೋಟ ಗಾರಿಕಾ ನಿಗಮದ ಬೋವಿಕ್ಕಾನದಲಿ ರುವ ಔಟ್‌ಲೆಟ್ ಸ್ಟೋರ್‌ಗೆ ನಿನ್ನೆ ರಾತ್ರಿ ಬೆಂಕಿ ತಗಲಿ ಅದು ಪೂರ್ಣವಾಗಿ ಭಸ್ಮಗೊಂಡಿದೆ.
ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಕೃಷ್ಣ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.
ಈ ಔಟ್‌ಲೆಟ್‌ನೊಳಗೆ ಸಾಧಾರಣವಾಗಿ ತೋಟಗಾರಿಕೆ ನಿಗಮದ ಗೋಡಂಬಿಗಳನ್ನು ದಾಸ್ತಾನು ಇರಿಸಲಾಗುತ್ತಿತ್ತು. ಆದರೆ ಇತ್ತೀಚೆಗಿ ನಿಂದ ಆ ಸ್ಟೋರನ್ನು ಉಪಯೋಗಿ ಸುತ್ತಿರಲಿಲ್ಲ. ಮಾತ್ರವಲ್ಲ ಅದರೊಳಗೆ ಯಾವುದೇ ಸಾಮಗ್ರಿಗಳನ್ನು ದಾಸ್ತಾನು ಇರಿಸಲಾಗಿಲ್ಲ. ಆದರೆ ನಿನ್ನೆ ಇದಕ್ಕೆ ಬೆಂಕಿ ತಗಲಿರುವುದಾದರೂ ಹೇಗೆ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಬೆಂಕಿ ಅನಾಹುತದಿಂದ ಸುಮಾರು ೫೦೦೦೦ ರೂ.ಗಳ ನಷ್ಟ ಅಂದಾ ಜಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.