ತೋಟದಲ್ಲಿ ಸ್ಫೋಟ ಯುವತಿಗೆ ಗಂಭೀರ

ಕಾಸರಗೋಡು: ಅರಣ್ಯ ಗಡಿಯ ತೋಟದಲ್ಲಿ ಸ್ಫೋಟಕ ಸಾಮಗ್ರಿ ಸಿಡಿದು ಯುವತಿ ಗಂಭೀರಗಾಯ ಗೊಂಡ ಘಟನೆ ನಡೆದಿದೆ.ರಾಜಪುರ ಸಮೀಪದ ಬಳಾಂತೋಡು ಅಡ್ಕತ್ತ ಎಂಬಲ್ಲಿನ ಅಡಿಕೆ ತೋಟದಲ್ಲಿ ಈ ಸ್ಫೋಟ ನಡೆದಿದೆ. ಇದರಲ್ಲಿ ಅಡ್ಕದ ವಸಂತಿ (42) ಎಂಬವರ ಕೈ, ಕಾಲು ಮತ್ತು ಮುಖಕ್ಕೆ ಗಂಭೀರ ಗಾಯಗೊಂಡಿದ್ದು, ಮಾತ್ರವಲ್ಲದೆ ಅವರ ಒಂದು ಕೈಯ ಎರಡು ಬೆರಳುಗಳು ಬೇರ್ಪಟ್ಟಿವೆ. ಅಕ್ಟೋಬರ್ 7ರಂದು ಬೆಳಿಗ್ಗೆ 11.30ಕ್ಕೆ ಈ ಸ್ಫೋಟ ನಡೆದಿದ್ದರೂ ನಿನ್ನೆಯಷ್ಟೇ ಈ ವಿಷಯ ರಾಜಪುರಂ ಪೊಲೀಸರ ಗಮನಕ್ಕೆ ಬಂದಿದೆ. ಗಾಯಗೊಂಡ ವಸಂತಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಫೋಟ ನಡೆದ ವೇಳೆ ವಸಂತಿಯವರ ಜತೆಗೆ ಇನ್ನೋರ್ವೆ ಮಹಿಳೆಯಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಸ್ಫೋಟ ಉಂಟಾದ ಅಡಿಕೆ ತೋಟ ಮಾಲಕ್ಕಲ್ ನಿವಾಸಿಯದ್ದಾಗಿದೆ. ಈ ತೋಟ ಅರಣ್ಯದ ಗಡಿಯಲ್ಲಿದ್ದು, ಅಲ್ಲಿ ವನ್ಯಜೀವಿಗಳ ಉಪಟಳವೂ ಇದೆ. ವನ್ಯ ಜೀವಿಗಳನ್ನು ಅಟ್ಟಲು ಯಾರೋ ಈ ತೋಟದಲ್ಲಿ ಸ್ಫೋಟ ಸಾಮಗ್ರಿಗಳನ್ನು ತಂದಿರಿಸಿರಬ ಹುದೆಂದು ಶಂಕಿಸಲಾಗಿದೆ. ಪೊಲೀಸ್ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಸ್ಫೋಟ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಇದರ ಜತೆಗೆ ಬೆರಳಚ್ಚು ತಜ್ಞರು ಆಗಮಿಸಿ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ಇದರ ಆಧಾರದಲ್ಲಿ ಈ ಸ್ಫೋಟಕ ವಸ್ತುಗಳನ್ನು ಅಲ್ಲಿ ತಂದಿರಿಸಿರುವವರನ್ನು ಪತ್ತೆಹಚ್ಚುವ ಯತ್ನದಲ್ಲೂ ಪೊಲೀಸರು ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page