ತ್ಯಾಜ್ಯ ಸಂಗ್ರಹಕ್ಕೆ ಕುಂಬಳೆಯಲ್ಲೊಂದು ಸರಕಾರಿ ಕಚೇರಿ ಕಟ್ಟಡ
ಕುಂಬಳೆ: ಕೃಷಿ ಇಲಾಖೆ ಅಸಿ. ಡೈರೆಕ್ಟರ್ ಕಚೇರಿಗೆ ಕುಂಬಳೆ ಪಂಚಾಯತ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊಡುಗೆಯಾಗಿ ಒಪ್ಪಿಸಿದೆ.
ಶುಚಿತ್ವದ ಮಹತ್ವ ತಿಳಿಸುವ ತ್ರಿಸ್ತರ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಅಧಿಕಾರಿಗಳು ಪರಿಶುದ್ಧತೆಯ ಕಾವಲುಗಾರರಾದ ಸರಕಾರಿ ವಿಭಾಗಗಳು ಹಾಗೂ ಸರಕಾರ ಅದಕ್ಕೆ ಕಾವಲು ನಿಂತಿದೆ. ಶೇಡಿಕಾವ್‌ನಲ್ಲಿ ಇತ್ತೀಚೆಗಿನವರೆಗೆ ಕಾರ್ಯಾಚರಿಸಿದ್ದ ಅಗ್ರಿಕಲ್ಚರ್ ಅಸಿ. ಡೈರೆಕ್ಟರ್ ಕಚೇರಿಯ ಪ್ರವೇಶದ್ವಾರ, ಮುಂಭಾಗದಲ್ಲಿ ಮಾತ್ರವಲ್ಲದೆ ಕಚೇರಿಯೊಳಗೂ ತ್ಯಾಜ್ಯವನ್ನು ರಾಶಿಹಾಕಿರುವುದು ಕಂಡುಬರುತ್ತಿದೆ. ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಜನ್ಮ ದಿನಾಚರಣೆಗೆ ಇನ್ನೊಂದು ದಿನ ಮಾತ್ರ ಬಾಕಿಯಿರುವಾಗಲೇ ಸರಕಾರಿ ಕಚೇರಿ ಯೊಳಗೆ ಈ ರೀತಿಯಲ್ಲಿ ತ್ಯಾಜ್ಯವನ್ನು ರಾಶಿಹಾಕಿ ದುರ್ನಾತ ಸೃಷ್ಟಿಸಲಾಗಿದೆ. ಸಾಂಕ್ರಾಮಿಕ ರೋಗಗಳು ಭೀತಿ ಹುಟ್ಟಿ ಸುತ್ತಿರುವಾಗ ಅದರಿಂದ ಹರಿದುಬರುತ್ತಿ ರುವ ಮಲಿನ ಜಲ ಸಮೀಪ ಪ್ರದೇಶಗಳಲ್ಲಿ ಕಟ್ಟಿ ನಿಂತು ಸಮೀಪದ ಬಾವಿಗಳಿಗೂ ಹರಿದು ಸೇರುತ್ತಿದೆ ಯೆಂದು ನಾಗರಿಕರು ತಿಳಿಸುತ್ತಿದ್ದಾರೆ.
ಶುಚಿತ್ವದ ಮಹತ್ವವನ್ನು ಸಾರುತ್ತಿರುವ ಅಧಿಕಾರಿಗಳು ತಮ್ಮ ಸುತ್ತಮುತ್ತ ತುಂಬಿಕೊಂಡಿರುವ ತ್ಯಾಜ್ಯವನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆಂದು ನಾಗರಿಕರು ಆರೋಪಿಸುತ್ತಿದ್ದಾರೆ.