ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಅಗ್ನಿಶಾಮನ ಸೌಕರ್ಯ ಖಾತರಿಪಡಿಸಲು ತೀರ್ಮಾನ
ಕಾಸರಗೋಡು: ತ್ಯಾಜ್ಯಗಳನ್ನು ತಂದು ಸಂಗ್ರಹಿಸಲಾಗುವ ಮೆಟೀರಿಯಲ್ ಕಲೆಕ್ಷನ್ ಫೆಸಿಲಿಟೀಸ್ (ಎಂಸಿಎಫ್)ನಲ್ಲಿ ಅಗ್ನಿಶಾಮನ ಸೌಕರ್ಯ ಖಾತರಿ ಪಡಿಸಲು ರಾಜ್ಯ ಸ್ಥಳೀಯಾಡಳಿತ ಇಲಾಖೆ ತೀರ್ಮಾನಿಸಿದೆ. ಇದರಂತೆ ಎಂ.ಸಿ.ಎಫ್ನಲ್ಲಿ ಇನ್ನು ಅಗ್ನಿ ಬಾಧೆ ಉಂಟಾದಲ್ಲಿ ಅದನ್ನು ತಕ್ಷಣ ನಂದಿಸುವ ರೀತಿಯಲ್ಲಿ ಅಗತ್ಯದ ಸೌಕರ್ಯಗಳನ್ನೂ ಅಲ್ಲೇ ಏರ್ಪಡಿಸಲಾಗುವುದು. ರಾಜ್ಯದ ಕಾರ್ಯವೆಸಗುತ್ತಿರುವ ಎಂ.ಸಿ.ಎಫ್ಗಳ ಪೈಕಿ ಹಲವು ಕೇಂದ್ರಗಳಲ್ಲಿ ಇತ್ತೀಚೆಗೆ ಭಾರೀ ಅಗ್ನಿ ಅನಾಹುತಗಳು ಉಂಟಾದ ಘಟನೆಗಳು ನಡೆದಿದ್ದು, ಅದನ್ನು ಪರಿUಣಿಸಿ ಇಂತಹ ನೂತನ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮmಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ತೀರ್ಮಾನವನ್ನು ಸಭೆ ಕೈಗೊಂಡಿದೆ. ಇಂತಹ ಕೇಂದ್ರಗಳಲ್ಲಿ ಪೊಲೀಸ್ ಗಸ್ತು ತಿರುಗುವಿಕೆಯನ್ನು ಇನ್ನು ಏರ್ಪಡಿಸಲಾಗುವುದು.